ಟೆಸ್ಟ್‌ನಲ್ಲಿ ಟೀಂ ಇಂಡಿಯಾದ 10 ಅತಿ ದೊಡ್ಡ ಗೆಲುವುಗಳಿವು

23 september 2024

Pic credit: Google

ಪೃಥ್ವಿ ಶಂಕರ

Pic credit: Google

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 280 ರನ್‌ಗಳಿಂದ ಗೆದ್ದುಕೊಂಡಿದೆ. ಇದು ಟೆಸ್ಟ್‌ನಲ್ಲಿ ರನ್‌ಗಳ ವಿಷಯದಲ್ಲಿ ಭಾರತಕ್ಕೆ 9ನೇ ಅತಿ ದೊಡ್ಡ ಗೆಲುವಾಗಿದೆ. ಟೆಸ್ಟ್‌ನಲ್ಲಿ ಭಾರತ ಪಡೆದ 10 ದೊಡ್ಡ ಗೆಲುವುಗಳನ್ನು ನಾವು ನೋಡುವುದಾದರೆ..

Pic credit: Google

ಈ ವರ್ಷದ ಆರಂಭದಲ್ಲಿ ರಾಜ್‌ಕೋಟ್ ಟೆಸ್ಟ್‌ನಲ್ಲಿ ಭಾರತ 434 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಇದು ರನ್​ಗಳ ವಿಷಯದಲ್ಲಿ ಭಾರತದ ಮೊದಲ ಅತಿದೊಡ್ಡ ಗೆಲುವಾಗಿದೆ.

Pic credit: Google

2021 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ 372 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.

Pic credit: Google

2015 ರಲ್ಲಿ ದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 337 ರನ್​ಗಳಿಂದ ಸೋಲಿಸಿತ್ತು.

Pic credit: Google

2016 ರಲ್ಲಿ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 321 ರನ್‌ಗಳ ಜಯ ಸಾಧಿಸಿತ್ತು.

Pic credit: Google

2008 ರಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 320 ರನ್​ಗಳಿಂದ ಸೋಲಿಸಿತ್ತು.

Pic credit: Google

2019 ರಲ್ಲಿ ವೆಸ್ಟ್ ಇಂಡೀಸ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆತಿಥೇಯ ವಿಂಡೀಸ್ ವಿರುದ್ಧ ಭಾರತ 318 ರನ್​ಗಳಿಂದ ಗೆದ್ದಿತ್ತು. ವಿದೇಶಿ ಮೈದಾನದಲ್ಲಿ ಇದು ಟೀಂ ಇಂಡಿಯಾದ ಅತಿ ದೊಡ್ಡ ರನ್ ಗೆಲುವಾಗಿದೆ.

Pic credit: Google

2021ರಲ್ಲಿ ಚೆನ್ನೈ ಮೈದಾನದಲ್ಲಿಯೇ ಇಂಗ್ಲೆಂಡ್ ವಿರುದ್ಧ ಭಾರತ 317 ರನ್‌ಗಳಿಂದ ಜಯ ಸಾಧಿಸಿತ್ತು.

Pic credit: Google

2017ರಲ್ಲಿ ಶ್ರೀಲಂಕಾಕ್ಕೆ ತೆರಳಿದ್ದ ಭಾರತ ಗಾಲೆ ಟೆಸ್ಟ್‌ನಲ್ಲಿ 304 ರನ್‌ಗಳಿಂದ ಜಯಗಳಿಸಿತ್ತು.

Pic credit: Google

1996 ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 280 ರನ್​ಗಳ ಅಂತರದ ಜಯ ಸಾಧಿಸಿತ್ತು.