ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ ಆರಂಭಿಸಿದೆ. ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 280 ರನ್‌ಗಳ ಜಯ ಸಾಧಿಸಿದೆ.
Pic credit: Google
ಈ ಗೆಲುವು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ವಿಶೇಷವಾಗಿತ್ತು. ಈ ಗೆಲುವಿನೊಂದಿಗೆ ರೋಹಿತ್ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರನ್ನು ವಿಶೇಷ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ.
Pic credit: Google
ರೋಹಿತ್ ಶರ್ಮಾ ಇದೀಗ ಟೀಂ ಇಂಡಿಯಾ ಪರ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.
Pic credit: Google
ಸಚಿನ್ ತೆಂಡೂಲ್ಕರ್ ಅವರು ಟೀಮ್ ಇಂಡಿಯಾ ಪರ ಒಟ್ಟು 664 ಪಂದ್ಯಗಳನ್ನು ಆಡಿದ್ದು, ಒಟ್ಟು 307 ಪಂದ್ಯಗಳ ಗೆಲುವಿನ ಭಾಗವಾಗಿದ್ದರು.
Pic credit: Google
ಇದೀಗ ಸಚಿನ್ ಅವರನ್ನು ಹಿಂದಿಕ್ಕಿರುವ ರೋಹಿತ್ ಶರ್ಮಾ ಇದುವರೆಗೆ ಒಟ್ಟು 308 ಪಂದ್ಯಗಳ ಗೆಲುವಿನ ಭಾಗವಾಗಿದ್ದಾರೆ.
Pic credit: Google
ಟೀಂ ಇಂಡಿಯಾ ಪರ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಇದುವರೆಗೆ 322 ಗೆಲುವಿನ ಭಾಗವಾಗಿದ್ದಾರೆ.
Pic credit: Google
ರೋಹಿತ್ ಶರ್ಮಾ ಇದುವರೆಗೆ ಟೀಮ್ ಇಂಡಿಯಾದ 35 ಟೆಸ್ಟ್, 164 ಏಕದಿನ ಮತ್ತು 102 ಟಿ20 ಪಂದ್ಯಗಳ ಗೆಲುವಿನ ಭಾಗವಾಗಿದ್ದಾರೆ.