ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಟೆಸ್ಟ್ ಸರಣಿಯ ಬಳಿಕ 3 ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ.
Pic credit: Google
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಪಂದ್ಯ ಚೆನ್ನೈನಲ್ಲಿ ಸೆಪ್ಟೆಂಬರ್ 19 ರಿಂದ 23 ರವರೆಗೆ ಮತ್ತು ಎರಡನೇ ಟೆಸ್ಟ್ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರವರೆಗೆ ಕಾನ್ಪುರದಲ್ಲಿ ನಡೆಯಲಿದೆ.
Pic credit: Google
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ಭಾರತಕ್ಕೆ ಬರುವ ಮುನ್ನ ಇಡೀ ತಂಡಕ್ಕೆ 3.20 ಕೋಟಿ ಬಾಂಗ್ಲಾದೇಶಿ ಟಾಕಾ ಅಂದರೆ ಸುಮಾರು 2.25 ಕೋಟಿ ರೂಪಾಯಿ ನೀಡಲಾಗಿದೆ.
Pic credit: Google
ಬಾಂಗ್ಲಾದೇಶದ ಆಟಗಾರರು 2.25 ಕೋಟಿ ಬಹುಮಾನದ ಜೊತೆಗೆ ವಿಶೇಷ ಬ್ಯಾಟ್ ಕೂಡ ಪಡೆದರು.
Pic credit: Google
ಅಷ್ಟಕ್ಕೂ ಬಾಂಗ್ಲಾದೇಶ ಆಟಗಾರರಿಗೆ ಈ ಭಾರಿ ಮೊತ್ತದ ಬಹುಮಾನ ಸಿಗಲು ಕಾರಣವೆಂದರೆ, ಪಾಕಿಸ್ತಾನವನ್ನು ಅವರದ್ದೇ ನೆಲದಲ್ಲಿ ಹೀನಾಯವಾಗಿ ಸೋಲಿಸಿದ್ದು.
Pic credit: Google
2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವನ್ನು 2-0 ಅಂತರದಿಂದ ಸೋಲಿಸಿದ್ದ ಬಾಂಗ್ಲಾದೇಶ ತಂಡಕ್ಕೆ ಇದು ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಮೊದಲ ಜಯವಾಗಿತ್ತು. ಹೀಗಾಗಿ ಬಾಂಗ್ಲಾ ಆಟಗಾರರಿಗೆ ಬಹುಮಾನ ನೀಡಲಾಗಿದೆ.
Pic credit: Google
ಆದರೆ ಈ ಭಾರಿ ಮೊತ್ತದ ಬಹುಮಾನದ ಹಣವನ್ನು ಬಾಂಗ್ಲಾದೇಶದ ಪ್ರವಾಹ ಸಂತ್ರಸ್ತರಿಗೆ ದೇಣಿಗೆ ನೀಡಲಾಗುವುದು ಎಂದು ಬಿಸಿಬಿ ತಿಳಿಸಿದೆ.