ಏಕದಿನ ವಿಶ್ವಕಪ್‌ನಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕ ಪಟ್ಟಿ ಇಲ್ಲಿದೆ.
06 November 2023
ಐದನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ ತಂಡ, 2015ರ ವಿಶ್ವಕಪ್‌ನಲ್ಲಿ ಮೈಕೆಲ್ ಕ್ಲಾರ್ಕ್ ನೇತೃತ್ವದಲ್ಲಿ ಆರು ಸತತ ಗೆಲುವು ದಾಖಲಿಸಿತ್ತು.
ಮಾರ್ಟಿನ್ ಕ್ರೋವ್ ನೇತೃತ್ವದ ನ್ಯೂಜಿಲೆಂಡ್ 1992 ರ ವಿಶ್ವಕಪ್‌ನಲ್ಲಿ ಸತತ 7 ಗೆಲುವು ಸಾಧಿಸಿತ್ತು.
ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರ ವಿಶ್ವಕಪ್‌ನಲ್ಲಿ ಸತತ 8 ಗೆಲುವು ದಾಖಲಿಸಿತ್ತು. ಆದರೆ ಫೈನಲ್‌ನಲ್ಲಿ ಆಸೀಸ್ ಎದುರು ಮುಗ್ಗರಿಸಿತ್ತು.
ಬ್ರೆಂಡನ್ ಮೆಕಲಮ್ ನಾಯಕತ್ವದಲ್ಲಿ ನ್ಯೂಜಿಲೆಂಡ್ 2015 ರ ವಿಶ್ವಕಪ್ ಆವೃತ್ತಿಯಲ್ಲಿ ಎಂಟು ಪಂದ್ಯಗಳನ್ನು ಗೆದ್ದಿತ್ತು.
ರೋಹಿತ್ ಶರ್ಮಾ ಇಲ್ಲಿಯವರೆಗೆ 2023 ರ ವಿಶ್ವಕಪ್‌ನಲ್ಲಿ ಭಾರತವನ್ನು ಸತತ 8 ಗೆಲುವಿನತ್ತ ಮುನ್ನಡೆಸಿದ್ದಾರೆ.
ಎಂಎಸ್ ಧೋನಿ ನೇತೃತ್ವದ ಭಾರತವು 2011 ಮತ್ತು 2015 ರ ವಿಶ್ವಕಪ್‌ನಾದ್ಯಂತ ಸತತ 11 ಪಂದ್ಯಗಳನ್ನು ಗೆದ್ದಿದೆ.
2011 ರ ಆವೃತ್ತಿಯಲ್ಲಿ ಭಾರತ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ನಂತರ 2015 ರ ವಿಶ್ವಕಪ್‌ನಲ್ಲಿ ಏಳು ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಗೆದ್ದಿತ್ತು.
ರಿಕಿ ಪಾಂಟಿಂಗ್ ಅವರು 2003, 2007 ಮತ್ತು 2011 ರ ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ನಾಯಕರಾಗಿ ಸತತ 24 ವಿಶ್ವಕಪ್ ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ.
ಕಿವೀಸ್ ಮಣಿಸಿದ ಪಾಕ್ ತಂಡಕ್ಕೆ ದಂಡದ ಬರೆ ಎಳೆದ ಐಸಿಸಿ..!