ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮಳೆಪೀಡಿತ ಪಂದ್ಯವನ್ನು ಗೆದ್ದು ಬೀಗಿದ ಪಾಕಿಸ್ತಾನ ತಂಡಕ್ಕೆ ಐಸಿಸಿ ದಂಡ ವಿದಿಸಿದೆ.

06 November 2023

ನವೆಂಬರ್ 4 ರಂದು ನಡೆದ ಪಂದ್ಯದಲ್ಲಿ ಡಕ್​ವರ್ತ್​ ಲೂಯಿಸ್ ನಿಯಮದಡಿಯಲ್ಲಿ ಪಾಕ್ ತಂಡ 21 ರನ್​ಗಳ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ತಲುಪುವ ಭರವಸೆಯನ್ನು ಹಾಗೇ ಉಳಿಸಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಐಸಿಸಿ ದಂಡ ವಿಧಿಸಿದೆ.

ನಿಧಾನಗತಿಯ ಓವರ್ ರೇಟ್​ನಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಾಕಿಸ್ತಾನಕ್ಕೆ ದಂಡ ವಿಧಿಸಿದೆ.

ಬಾಬರ್ ಪಡೆ ಬೌಲರ್‌ಗಳು ನಿಗದಿತ ಸಮಯದಲ್ಲಿ 2 ಓವರ್‌ಗಳನ್ನು ಕಡಿಮೆ ಬೌಲ್ ಮಾಡಿದಕ್ಕೆ ಈ ತಂಡ ವಿದಿಸಲಾಗಿದೆ.

ಐಸಿಸಿ ನಿಯಮದಡಿಯಲ್ಲಿ ಪಾಕಿಸ್ತಾನ ತಂಡ ಪಂದ್ಯದ ಶುಲ್ಕದ 10 ಪ್ರತಿಶತವನ್ನು ದಂಡವಾಗಿ ಪಾವತಿಸಬೇಕಾಗಿದೆ.

ಈ ಆರೋಪಗಳನ್ನು ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ವಿಲ್ಸನ್ ಮತ್ತು ರಿಚರ್ಡ್ ಕೆಟಲ್‌ಬರೋ, ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನಾಲ್ಕನೇ ಅಂಪೈರ್ ಜೋಯಲ್ ವಿಲ್ಸನ್ ಮಾಡಿದ್ದಾರೆ.

ಪಾಕ್ ನಾಯಕ ಬಾಬರ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದು, ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.