ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ.

05 November 2023

ಇದು ಕೊಹ್ಲಿಯ 49ನೇ ಶತಕವಾಗಿದ್ದು, ಈ ಶತಕದೊಂದಿಗೆ ವಿರಾಟ್ ಸಚಿನ್ ತೆಂಡೂಲ್ಕರ್ ಅವರ ಅಧಿಕ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇಂದು ಅಂದರೆ ನವೆಂಬರ್ 5 ರಂದು ಕೊಹ್ಲಿ ಜನ್ಮದಿನವಾಗಿದ್ದು, ತಮ್ಮ ಜನ್ಮದಿನದಂದು ಶತಕ ಬಾರಿಸುವ ಮೂಲಕ ವಿರಾಟ್ ಈ ಶತಕವನ್ನು ಸ್ಮರಣೀಯಗೊಳಿಸಿದ್ದಾರೆ.

ಇದರೊಂದಿಗೆ ವಿಶ್ವಕಪ್‌ನಲ್ಲಿ ಹುಟ್ಟುಹಬ್ಬದಂದೇ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ.

ವಿರಾಟ್ ತಮ್ಮ ಹುಟ್ಟುಹಬ್ಬದಂದು ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಕೊಹ್ಲಿಗಿಂತ ಮೊದಲು, ಈ ಕೆಲಸವನ್ನು ನ್ಯೂಜಿಲೆಂಡ್‌ನ ರಾಸ್ ಟೇಲರ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಮಾಡಿದ್ದರು.

2011 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮಾರ್ಚ್ 8 ರಂದು ರಾಸ್ ಟೇಲರ್ ತಮ್ಮ ಜನ್ಮದಿನದಂದು 131 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ಇದೇ ವಿಶ್ವಕಪ್‌ನಲ್ಲಿ, ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಅಕ್ಟೋಬರ್ 20 ರಂದು ಅಂದರೆ ತಮ್ಮ ಹುಟ್ಟುಹಬ್ಬದಂದು ಪಾಕಿಸ್ತಾನದ ವಿರುದ್ಧ 121 ರನ್‌ಗಳ ಇನಿಂಗ್ಸ್‌ ಆಡಿದ್ದರು.

ಇದರೊಂದಿಗೆ ವಿರಾಟ್ ಕೊಹ್ಲಿ ಸೀಮಿತ ಓವರ್‌ಗಳಲ್ಲಿ 50 ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಕೊಹ್ಲಿ 49 ಏಕದಿನ ಮತ್ತು ಒಂದು ಟಿ20 ಶತಕ ಸಿಡಿಸಿದ್ದಾರೆ.