ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.

05 November 2023

ಆಫ್ರಿಕಾ ವಿರುದ್ಧ ಅಜೇಯ 40 ರನ್ ಬಾರಿಸಿರುವ ವಿರಾಟ್ ಏಕದಿನ ವಿಶ್ವಕಪ್​ನಲ್ಲಿ 1500 ರನ್ ಪೂರೈಸಿದ್ದಾರೆ.

ಹಾಗೆಯೇ ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 45 ವಿಶ್ವಕಪ್​ ಪಂದ್ಯಗಳಲ್ಲಿ 2278 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಪ್ರಸ್ತುತ ನಾಲ್ಕನೇ ಏಕದಿನ ವಿಶ್ವಕಪ್ ಆಡುತ್ತಿರುವ ಕೊಹ್ಲಿ ಪಂದ್ಯಾವಳಿಯಲ್ಲಿ 1500* ರನ್ ಪೂರೈಸಿದ್ದಾರೆ.

ಕೊಹ್ಲಿ ಇದುವರೆಗೂ ಆಡಿರುವ 34 ಏಕದಿವನ ವಿಶ್ವಕಪ್ ಪಂದ್ಯಗಳಲ್ಲಿ 53 ಕ್ಕಿಂತ ಹೆಚ್ಚು ಸರಾಸರಿಯಲ್ಲಿ  3 ಶತಕ ಹಾಗೂ 10 ಅರ್ಧಶತಕಗಳೊಂದಿಗೆ 1,500 ರನ್‌ಗಳ ಗಡಿಯನ್ನು ಮುಟ್ಟಿದರು.

ಕೊಹ್ಲಿ ಹೊರತಾಗಿ ಸಚಿನ್ ತೆಂಡೂಲ್ಕರ್ (2,278), ರಿಕಿ ಪಾಂಟಿಂಗ್ (1,743), ಮತ್ತು ಕುಮಾರ ಸಂಗಕ್ಕಾರ (1,532) ಈ ಮೈಲಿಗಲ್ಲು ಸಾಧಿಸಿರುವ ಆಟಗಾರರಾಗಿದ್ದಾರೆ.