ಟೀಂ ಇಂಡಿಯಾ ಪಂದ್ಯಗಳ ಟಿಕೆಟ್ ಬೆಲೆ ಉಳಿದ ಪಂದ್ಯಗಳಿಗಿಂತ 10 ಪಟ್ಟು ದುಬಾರಿ..!
02 February 2025
Pic credit: Google
ಪೃಥ್ವಿ ಶಂಕರ
2025 ರ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ 8 ತಂಡಗಳ ನಡುವೆ ನಡೆಯಲಿರುವ ಈ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
Pic credit: Google
ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ. ವಿಶೇಷವೆಂದರೆ ಪಾಕಿಸ್ತಾನ ಮತ್ತು ದುಬೈ ಪಂದ್ಯಗಳಿಗೆ ವಿಭಿನ್ನ ಬೆಲೆಗಳನ್ನು ನಿಗಧಿಪಡಿಸಲಾಗಿದೆ.
Pic credit: Google
ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಅಗ್ಗದ ಟಿಕೆಟ್ 1000 ರೂಪಾಯಿಗಳು. ಇದು ಭಾರತದಲ್ಲಿ 310 ರೂಪಾಯಿಗಳಿಗೆ ಸಮಾನವಾಗಿದೆ.
Pic credit: Google
ಮತ್ತೊಂದೆಡೆ, ದುಬೈನಲ್ಲಿ ನಡೆಯಲ್ಲಿರುವ ಟೀಂ ಇಂಡಿಯಾದ ಪಂದ್ಯಗಳ ಟಿಕೆಟ್‌ಗಳು ಪಾಕಿಸ್ತಾನಕ್ಕಿಂತ 10 ಪಟ್ಟು ಹೆಚ್ಚು ದುಬಾರಿಯಾಗಿದೆ.
Pic credit: Google
ದುಬೈನಲ್ಲಿ ನಡೆಯುತ್ತಿರುವ ಎಲ್ಲಾ ಪಂದ್ಯಗಳಿಗೆ ಅಗ್ಗದ ಟಿಕೆಟ್ 125 ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್ ಆಗಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ 2900 ರೂ.
Pic credit: Google
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಸೇರಿದಂತೆ 8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ.
Pic credit: Google
ಭಾರತ ತಂಡವು ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದೊಂದಿಗೆ 'ಎ' ಗುಂಪಿನಲ್ಲಿದ್ದು, ಈ ತಂಡಗಳ ವಿರುದ್ಧ ಲೀಗ್ ಪಂದ್ಯಗಳನ್ನು ಆಡಲಿದೆ.