ಒಲಿಂಪಿಕ್ಸ್ ಪದಕ ಬೇಟೆಯಲ್ಲಿ ಭಾರತ- ಪಾಕಿಸ್ತಾನ ನಡುವಿರುವ ವ್ಯತ್ಯಾಸವೆಷ್ಟು ಗೊತ್ತಾ?

12 July 2024

Pic credit - Google

ಪೃಥ್ವಿಶಂಕರ

Pic credit -  Google

ಪ್ಯಾರಿಸ್ ಒಲಿಂಪಿಕ್ಸ್‌ಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ದೇಶಗಳು ಈಗಾಗಲೇ ತಮ್ಮ ಸಿದ್ಧತೆಯನ್ನು ಪೂರ್ಣಗೊಳಿಸಿವೆ.

ಪ್ಯಾರಿಸ್ ಒಲಿಂಪಿಕ್ಸ್

Pic credit -  Google

ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲ್ಲಿದ್ದು, ಇದರಲ್ಲಿ ಭಾರತದ 100 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಜುಲೈ 26 ರಿಂದ ಆರಂಭ

Pic credit -  Google

ಕ್ರೀಡಾ ಕ್ಷೇತ್ರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಕಷ್ಟು ಪೈಪೋಟಿ ಇದೆ. ಆದರೆ ಒಲಿಂಪಿಕ್ಸ್‌ನಲ್ಲಿ ಮಾತ್ರ ಪಾಕಿಸ್ತಾನದ ಮೇಲೆ ಭಾರತವೇ ಮೇಲುಗೈ ಸಾಧಿಸಿದೆ.

ಭಾರತ- ಪಾಕ್

Pic credit -  Google

ಎರಡೂ ದೇಶಗಳ ಒಟ್ಟು ಒಲಿಂಪಿಕ್ ಪದಕಗಳ ಬಗ್ಗೆ ಮಾತನಾಡುವುದಾದರೆ ಭಾರತ, ಪಾಕಿಸ್ತಾನಕ್ಕಿಂತ ಬಹಳ ಮುಂದಿದೆ.

ಭಾರತದ ಮೇಲುಗೈ

Pic credit -  Google

ಭಾರತ ಇದುವರೆಗೆ ಒಲಿಂಪಿಕ್ಸ್‌ನಲ್ಲಿ 10 ಚಿನ್ನ, ಒಂಬತ್ತು ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಒಳಗೊಂಡಂತೆ ಒಟ್ಟು 35 ಪದಕಗಳನ್ನು ಗೆದ್ದಿದೆ.

ಭಾರತ 35 ಪದಕ

Pic credit -  Google

ಮೂರು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಒಳಗೊಂಡಂತೆ ಪಾಕಿಸ್ತಾನ ಕೇವಲ 10 ಒಲಿಂಪಿಕ್ ಪದಕಗಳನ್ನು ಗೆದ್ದಿದೆ.

ಪಾಕಿಸ್ತಾನ 10 ಪದಕ

Pic credit -  Google

2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇದರಲ್ಲಿ ಭಾರತ ಒಂದು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಗೆದ್ದಿತ್ತು.

ಟೋಕಿಯೊದಲ್ಲಿ 7 ಪದಕ