ಡೈಮಂಡ್ ಲೀಗ್ ಟ್ರೋಫಿ ಗೆದ್ದರೆ ನೀರಜ್​ಗೆ ಸಿಗುವ ಬಹುಮಾನವೆಷ್ಟು ಗೊತ್ತಾ?

12 september 2024

Pic credit: Google

ಪೃಥ್ವಿ ಶಂಕರ

Pic credit: Google

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೊಂದು ಕ್ರೀಡಾಕೂಟದ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

Pic credit: Google

ಪ್ಯಾರಿಸ್‌ನಲ್ಲಿ ಚಿನ್ನದ ಪದಕ ವಂಚಿತರಾಗಿರುವ ನೀರಜ್ ಈಗ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಪ್ರಶಸ್ತಿಯೊಂದಿಗೆ ವರ್ಷವನ್ನು ಅಂತ್ಯಗೊಳಿಸುವ ಇರಾದೆಯಲ್ಲಿದ್ದಾರೆ.

Pic credit: Google

ಸೆ.13-14ರಂದು ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್​ನಲ್ಲಿ ಡೈಮಂಡ್ ಲೀಗ್ ಫೈನಲ್ ಆಯೋಜನೆಯಾಗಿದ್ದು, ಪುರುಷರ ವಿಭಾಗದ ಜಾವೆಲಿನ್ ಥ್ರೋ ಸ್ಪರ್ಧೆ ನ.14ರಂದು ನಡೆಯಲಿದೆ.

Pic credit: Google

ನೀರಜ್ ಕೆಲವೇ ದಿನಗಳ ಹಿಂದೆ ಈ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಈ ಮೂಲಕ 2022 ರ ನಂತರ ಮತ್ತೆ ಈ ಟ್ರೋಫಿಯನ್ನು ಗೆಲ್ಲುವ ಭರವಸೆಯಲ್ಲಿ ನೀರಜ್ ಇದ್ದಾರೆ.

Pic credit: Google

ಈ ಫೈನಲ್​ನಲ್ಲಿ ನೀರಜ್ ಗೆಲುವಿನಲ್ಲಿ ಯಶಸ್ವಿಯಾದರೆ ಅವರಿಗೆ 30 ಸಾವಿರ ಡಾಲರ್ ಅಂದರೆ ಸುಮಾರು 25.19 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

Pic credit: Google

ಎರಡನೇ ಸ್ಥಾನ ಪಡೆದರೆ 12,000 ಡಾಲರ್ (10 ಲಕ್ಷ ರೂ.) ಮತ್ತು ಮೂರನೇ ಸ್ಥಾನ ಪಡೆದರೆ 7,000 ಡಾಲರ್ (5.87 ಲಕ್ಷ) ಬಹುಮಾನ ಸಿಗಲಿದೆ.