ಲಾರ್ಡ್ಸ್‌ನಲ್ಲಿ ದಾಖಲೆಯ ಅರ್ಧಶತಕ ಸಿಡಿಸಿದ ಲಿವಿಂಗ್‌ಸ್ಟೋನ್
28 september 2024
Pic credit: Google
ಪೃಥ್ವಿ ಶಂಕರ
Pic credit: Google
ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ.
Pic credit: Google
ಈ ಸರಣಿಯಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್ ತಂಡ 186 ರನ್‌ಗಳಿಂದ ಗೆದ್ದುಕೊಂಡಿತು.
Pic credit: Google
ಈ ಗೆಲುವಿನೊಂದಿಗೆ ಸರಣಿ 2-2ರಲ್ಲಿ ಸಮಬಲಗೊಳಿಸಿದೆ. ಸರಣಿಯ ಮೊದಲೆರಡು ಪಂದ್ಯಗಳನ್ನು ಆಸೀಸ್ ಗೆದ್ದಿದ್ದರೆ, ಕೊನೆಯ 2 ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ.
Pic credit: Google
ಆಸ್ಟ್ರೇಲಿಯಾ ವಿರುದ್ಧದ ಈ 4ನೇ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ 27 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 62 ರನ್ ಗಳಿಸಿದರು.
Pic credit: Google
ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಲಿವಿಂಗ್‌ಸ್ಟೋನ್, ಇದರೊಂದಿಗೆ ಲಾರ್ಡ್ಸ್‌ನಲ್ಲಿ ಏಕದಿನದಲ್ಲಿ ಅತಿವೇಗದ ಅರ್ಧಶತಕ ಗಳಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡರು.
Pic credit: Google
ಈ ಮೊದಲು ಈ ದಾಖಲೆ ಮಿಚೆಲ್ ಮಾರ್ಷ್ ಹೆಸರಿನಲ್ಲಿತ್ತು. ಅವರು 2015ರಲ್ಲಿ ಇಂಗ್ಲೆಂಡ್ ವಿರುದ್ಧ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
Pic credit: Google
ಭಾರತದ ಪರ ಈ ದಾಖಲೆ ಬರೆದ ಮೊದಲ ಏಷ್ಯನ್ ಅಶ್ವಿನ್