ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿಯ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ನಡೆಯುತ್ತಿದೆ.
Pic credit: Google
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಪರ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಇತಿಹಾಸ ಸೃಷ್ಟಿಸಿದ್ದಾರೆ.
Pic credit: Google
ಅಶ್ವಿನ್ ಕಾನ್ಪುರ ಟೆಸ್ಟ್‌ನಲ್ಲಿ ತಮ್ಮ ಮೊದಲ ವಿಕೆಟ್ ಪಡೆಯುವ ಮೂಲಕ ಏಷ್ಯಾದಲ್ಲಿ ತಮ್ಮ 420 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದರು.
Pic credit: Google
ಇದರೊಂದಿಗೆ ಅಶ್ವಿನ್ ಭಾರತದ ಪರ ಏಷ್ಯಾದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದದಾರೆ.
Pic credit: Google
ಅಶ್ವಿನ್ಗಿಂತ ಮೊದಲು 419 ವಿಕೆಟ್ ಕಬಳಿಸಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು. ಇದೀಗ ಈ ದಾಖಲೆ ಅಶ್ವಿನ್ ಪಾಲಾಗಿದೆ.
Pic credit: Google
ಆರ್ ಅಶ್ವಿನ್ 71 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಅನಿಲ್ ಕುಂಬ್ಳೆ ಏಷ್ಯಾದಲ್ಲಿ ಒಟ್ಟು 82 ಟೆಸ್ಟ್ ಪಂದ್ಯಗಳಲ್ಲಿ ಈ ದಾಖಲೆ ಬರೆದಿದ್ದರು.
Pic credit: Google
ಅಶ್ವಿನ್ ಈಗ ಜಹೀರ್ ಖಾನ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಇದಕ್ಕಾಗಿ ಅವರಿಗೆ ಈಗ ಕೇವಲ 2 ವಿಕೆಟ್‌ಗಳ ಅಗತ್ಯವಿದೆ.
Pic credit: Google
ಈ ಪಂದ್ಯದಲ್ಲಿ ಆರ್ ಅಶ್ವಿನ್ ಇನ್ನೂ 2 ವಿಕೆಟ್ ಪಡೆದರೆ ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಜಹೀರ್ ಖಾನ್ 31 ವಿಕೆಟ್ ಪಡೆದು ಮುನ್ನಡೆಯಲ್ಲಿದ್ದಾರೆ.