ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್
ನಲ್ಲೂ ದ್ವಿಶತಕ ಸಿಡಿಸಿದ ಜೋ ರೂಟ್
1 september 2024
Pic credit: Google
ಪೃಥ್ವಿ ಶಂಕರ
Pic credit: Google
ಇಂಗ್ಲೆಂಡ್‌ನ ದಿಗ್ಗಜ ಬ್ಯಾಟ್ಸ್‌ಮನ್ ಜೋ ರೂಟ್ ಟೆಸ್ಟ್ ಮಾದರಿಯಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಒಂದರ ಹಿಂದೆ ಒಂದರಂತೆ ಹಲವು ದಾಖಲೆಗಳನ್ನು ಮಾಡುತ್ತಿದ್ದಾರೆ.
Pic credit: Google
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದರು.
Pic credit: Google
ಈ ಪಂದ್ಯದಲ್ಲಿ ಜೋ ರೂಟ್ ಬ್ಯಾಟ್ ಹಾಗೂ ಫೀಲ್ಡರ್ ಮೂಲಕ ದೊಡ್ಡ ದಾಖಲೆ ನಿರ್ಮಿಸಿದ್ದು, ಟೆಸ್ಟ್‌ನಲ್ಲಿ 200 ಕ್ಯಾಚ್‌ಗಳನ್ನು ಪಡೆದ ವಿಶ್ವದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.
Pic credit: Google
ಜೋ ರೂಟ್‌ಗಿಂತ ಮೊದಲು ರಾಹುಲ್ ದ್ರಾವಿಡ್, ಮಹೇಲಾ ಜಯವರ್ಧನೆ ಮತ್ತು ರಿಕಿ ಪಾಂಟಿಂಗ್ ಮಾತ್ರ ಮೊದಲ ಟೆಸ್ಟ್‌ನಲ್ಲಿ ತಲಾ 200 ಕ್ಯಾಚ್‌ಗಳನ್ನು ಹಿಡಿದಿದ್ದರು.
Pic credit: Google
ಟೆಸ್ಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಆಟಗಾರನಾಗಿ 210 ಕ್ಯಾಚ್‌ಗಳನ್ನು ಹಿಡಿದಿದ್ದರು.
Pic credit: Google
ಈ ದಾಖಲೆಯನ್ನು ಮುರಿಯಲು ಜೋ ರೂಟ್ ಈಗ ಕೇವಲ 11 ಕ್ಯಾಚ್‌ಗಳ ದೂರದಲ್ಲಿದ್ದಾರೆ. ಹೀಗಿರುವಾಗ ರಾಹುಲ್ ದ್ರಾವಿಡ್ ಅವರ ಈ ದಾಖಲೆ ಈಗ ಅಪಾಯದಲ್ಲಿದೆ.
Pic credit: Google
ಜೋ ರೂಟ್ ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದು, ಮಹೇಲಾ ಜಯವರ್ಧನೆ 205 ಕ್ಯಾಚ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೂಟ್‌ಗೆ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಲು ಹೆಚ್ಚು ಸಮಯ ಹಿಡಿಯುವುದಿಲ್ಲ.