159 ವರ್ಷಗಳ ಹಳೆಯ ದಾಖಲೆ ಮುರಿದ 16 ವರ್ಷದ ಪೋರ

2 september 2024

Pic credit: Google

ಪೃಥ್ವಿ ಶಂಕರ

Pic credit: Google

ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಮತ್ತು ಸರ್ರೆ ತಂಡಗಳ ನಡುವೆ ನಡೆದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಈ ಪಂದ್ಯ ಯುವ ಆಫ್ ಸ್ಪಿನ್ನರ್ ಫರ್ಹಾನ್ ಅಹ್ಮದ್ ಅವರ ಚೊಚ್ಚಲ ಪಂದ್ಯವಾಗಿತ್ತು.

Pic credit: Google

ಆಫ್ ಸ್ಪಿನ್ನರ್ ಫರ್ಹಾನ್ ಅಹ್ಮದ್ ಕೌಂಟಿ ಕ್ರಿಕೆಟ್ ಪದಾರ್ಪಣೆ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ 159 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಎಲ್ಲರ ಗಮನ ಸೆಳೆದರು.

Pic credit: Google

ನಾಟಿಂಗ್ ಹ್ಯಾಮ್ ಶೈರ್ ಪರ ಆಡಿದ ಫರ್ಹಾನ್ ಅಹ್ಮದ್ ಎರಡೂ ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ಸ್​ಮನ್​ಗಳಿಗೆ ತೊಂದರೆ ನೀಡಿ ಒಟ್ಟು 10 ವಿಕೆಟ್ ಪಡೆದರು. ಇದರೊಂದಿಗೆ ಅವರು ಶ್ರೇಷ್ಠ ಡಬ್ಲ್ಯುಜಿ ಗ್ರೇಸ್ ದಾಖಲೆಯನ್ನೂ ಮುರಿದರು.

Pic credit: Google

ಫರ್ಹಾನ್ ಅಹ್ಮದ್ ಬ್ರಿಟನ್‌ನಲ್ಲಿ ನಡೆದ ಪ್ರಥಮ ದರ್ಜೆ ಪಂದ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅವರು 16 ವರ್ಷ ಮತ್ತು 192 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು.

Pic credit: Google

ಇದಕ್ಕೂ ಮೊದಲು, WG ಗ್ರೇಸ್ 1865 ರಲ್ಲಿ ಓವಲ್‌ನಲ್ಲಿ ನಡೆದ ತಮ್ಮ ಪ್ರಥಮ ದರ್ಜೆ ಪಂದ್ಯದಲ್ಲಿ 84 ರನ್‌ಗಳಿಗೆ 13 ವಿಕೆಟ್‌ಗಳನ್ನು ಪಡೆದಿದ್ದರು. ಆಗ ಅವರ ವಯಸ್ಸು 16 ವರ್ಷ 340 ದಿನಗಳಾಗಿದ್ದವು.

Pic credit: Google

ಇದೀಗ ಫರ್ಹಾನ್ ಅಹ್ಮದ್ ಬ್ರಿಟನ್‌ನಲ್ಲಿ ಪ್ರಥಮ ದರ್ಜೆ ಪಂದ್ಯದ ಇನ್ನಿಂಗ್ಸ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.