ಐಪಿಎಲ್ 2025 ರ ಧಾರಣ ಪಟ್ಟಿಯನ್ನು ಎಲ್ಲಾ 10 ತಂಡಗಳು ಬಿಡುಗಡೆಗೊಳಿಸಿವೆ. ಇದರಲ್ಲಿ ಕೇವಲ 10 ಆಟಗಾರರಿಗೆ ಬರೋಬ್ಬರಿ 191 ಕೋಟಿ ರೂ. ಖರ್ಚಾಗಿದೆ. ಆ 10 ಆಟಗಾರರು ಯಾರ್ಯಾರು ಎಂಬುದರ ವಿವರ ಇಲ್ಲಿದೆ.
Pic credit: Google
ಧಾರಣೆಯಲ್ಲಿ ಅಧಿಕ ಮೊತ್ತ ಪಡೆದ ಆಟಗಾರರಲ್ಲಿ ಹೆನ್ರಿಚ್ ಕ್ಲಾಸೆನ್ ಮೊದಲ ಸ್ಥಾನದಲ್ಲಿದ್ದಾರೆ. ಅವರನ್ನ ಸನ್‌ರೈಸರ್ಸ್ ಹೈದರಾಬಾದ್ 23 ಕೋಟಿ ರೂ. ನೀಡಿ ಉಳಿಸಿಕೊಂಡಿದೆ.
Pic credit: Google
ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿಯನ್ನು ಆರ್ಸಿಬಿ ಫ್ರಾಂಚೈಸಿ 21 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.
Pic credit: Google
21 ಕೋಟಿ ಪಡೆದಿರುವ ಮತ್ತೊಬ್ಬ ಆಟಗಾರ ನಿಕೋಲಸ್ ಪೂರನ್ ಅವರನ್ನು ಲಕ್ನೋ ಸೂಪರ್ಜೈಂಟ್ಸ್ ಫ್ರಾಂಚೈಸಿ ಉಳಿಸಿಕೊಂಡಿದೆ.
Pic credit: Google
ರುತುರಾಜ್ ಗಾಯಕ್ವಾಡ್ ಹಾಗೂ ರವೀಂದ್ರ ಜಡೇಜಾಗೆ ತಲಾ 18 ಕೋಟಿ ರೂ. ನೀಡಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಉಳಿಸಿಕೊಂಡಿದೆ.
Pic credit: Google
ಹಾಗೆಯೇ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕೂಡ ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ರನ್ನು ತಲಾ 18 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.
Pic credit: Google
ಕ್ಲಾಸೆನ್ಗೆ 23 ಕೋಟಿ ರೂ. ನೀಡಿರುವ ಸನ್‌ರೈಸರ್ಸ್ ಹೈದರಾಬಾದ್, ತನ್ನ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ಗೆ 18 ಕೋಟಿ ರೂ. ನೀಡಿದೆ.
Pic credit: Google
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 4 ಆಟಗಾರರಿಗೆ ಅಧಿಕ ಮೊತ್ತ ನೀಡಿ ತಂಡದಲ್ಲಿ ಉಳಿಸಿಕೊಂಡಿದೆ. ಅವರಲ್ಲಿ ಜಸ್ಪ್ರೀತ್ ಬುಮ್ರಾಗೆ ಅತ್ಯಧಿಕ 18 ಕೋಟಿ ರೂ. ನೀಡಿದೆ.
Pic credit: Google
ಗುಜರಾತ್ ಟೈಟಾನ್ಸ್ ಕೂಡ ತಂಡದ ಸ್ಟಾರ್ ಆಲ್‌ರೌಂಡರ್ ರಶೀದ್ ಖಾನ್ಗೆ 18 ಕೋಟಿ ರೂ. ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.