ಬಿಜಿಟಿ ಟೆಸ್ಟ್‌ ಸರಣಿಯಲ್ಲಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

27  october 2024

Pic credit: Google

ಪೃಥ್ವಿ ಶಂಕರ

ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ನವೆಂಬರ್ 22 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ.

Pic credit: Google

ಬಿಸಿಸಿಐ ಈಗಾಗಲೇ ಈ ಸರಣಿಗಾಗಿ ತಂಡವನ್ನು ಘೋಷಿಸಿದ್ದು, ಸತತ ಮೂರನೇ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಕಾಂಗರೂಗಳ ನಾಡಿಗೆ ಟೀಂ ಇಂಡಿಯಾ ಪ್ರಯಾಣಿಸಲಿದೆ.

Pic credit: Google

ಆದರೆ ಅದಕ್ಕೂ ಮುನ್ನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ನೋಡೋಣ.

Pic credit: Google

ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅವರು ಆಡಿದ 34 ಪಂದ್ಯಗಳಲ್ಲಿ 3262 ರನ್ ಗಳಿಸಿದ್ದಾರೆ. ಇದರಲ್ಲಿ ಒಂಬತ್ತು ಶತಕ ಮತ್ತು 16 ಅರ್ಧ ಶತಕಗಳು ಸೇರಿವೆ.

Pic credit: Google

ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 29 ಪಂದ್ಯಗಳಲ್ಲಿ 2555 ರನ್ ಗಳಿಸಿದ್ದಾರೆ.

Pic credit: Google

ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಕ್ರಮವಾಗಿ 2434 ಮತ್ತು 2143 ರನ್‌ಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

Pic credit: Google

ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ 22 ಪಂದ್ಯಗಳಲ್ಲಿ 2049 ರನ್ ಗಳಿಸಿದ್ದರೆ, ಈ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಯ್ಕೆಯಾಗದ ಚೇತೇಶ್ವರ ಪೂಜಾರ 24 ಪಂದ್ಯಗಳಲ್ಲಿ 2033 ರನ್ ಗಳಿಸಿದ್ದಾರೆ.

Pic credit: Google

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ 24 ಪಂದ್ಯಗಳಲ್ಲಿ 1979 ರನ್ ಗಳಿಸಿದ್ದಾರೆ ಮತ್ತು ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.

Pic credit: Google

ಸಕ್ರಿಯ ಆಟಗಾರರ ಪೈಕಿ ಸದ್ಯ ಎರಡೂ ತಂಡಗಳಲ್ಲಿ ಕೊಹ್ಲಿ ಮುಂಚೂಣಿಯಲ್ಲಿದ್ದರೂ, ಪೂಜಾರ ನಿವೃತ್ತಿಯಾಗದಿದ್ದರೂ, ಈ ಬಾರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುತ್ತಿಲ್ಲ, ಹೀಗಾಗಿ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ.

Pic credit: Google