ಶೇನ್ ವಾರ್ನ್ ದಾಖಲೆ ಮುರಿದ ಆರ್ ಅಶ್ವಿನ್

24 october 2024

Pic credit: Google

ಪೃಥ್ವಿ ಶಂಕರ

Pic credit: Google

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು, ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

Pic credit: Google

ಅಶ್ವಿನ್ ಪಡೆದ ಈ ಮೂರು ವಿಕೆಟ್​ಗಳಲ್ಲಿ ಕಿವೀಸ್ ನಾಯಕ ಟಾಮ್ ಲೇಥಮ್, ಡೆವೊನ್ ಕಾನ್ವೆ ಮತ್ತು ವಿಲ್ ಯಂಗ್ ಸೇರಿದ್ದಾರೆ.

Pic credit: Google

ಇದರೊಂದಿಗೆ ಅಶ್ವಿನ್ ತವರು ನೆಲದಲ್ಲಿ ಟೆಸ್ಟ್‌ನಲ್ಲಿ 85 ನೇ ಬಾರಿಗೆ ಮೂರು ಅಥವಾ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಹಾಗೆಯೇ ಈ ವಿಚಾರದಲ್ಲಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದರು.

Pic credit: Google

ವಾರ್ನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 84ನೇ ಬಾರಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದರೆ, ಮುತ್ತಯ್ಯ ಮುರಳೀಧರನ್ ಮತ್ತು ಜೇಮ್ಸ್ ಆಂಡರ್ಸನ್ ಕ್ರಮವಾಗಿ 119 ಮತ್ತು 92 ಬಾರಿ ಈ ಸಾಧನೆ ಮಾಡಿದ್ದಾರೆ.

Pic credit: Google

ಇದಲ್ಲದೇ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸುವಲ್ಲಿ ಅಶ್ವಿನ್, ಆಸ್ಟ್ರೇಲಿಯಾದ ನಾಥನ್ ಲಿಯಾನ್ ಅವರನ್ನು ಹಿಂದಿಕ್ಕಿದ್ದರು.

Pic credit: Google

ಅಶ್ವಿನ್ ಆಸ್ಟ್ರೇಲಿಯದ ನಾಥನ್ ಲಿಯಾನ್ ಅವರನ್ನು ಹಿಂದಿಕ್ಕಿ, ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಏಳನೇ ಬೌಲರ್ ಎನಿಸಿಕೊಂಡರು.