ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಯಾವ ತಂಡದ ವಿರುದ್ಧ ಹೆಚ್ಚು ಜಯ ಸಾಧಿಸಿದೆ ಗೊತ್ತಾ?

21 october 2024

Pic credit: Google

ಪೃಥ್ವಿ ಶಂಕರ

Pic credit: Google

ಭಾರತ ಇದುವರೆಗೆ ಒಟ್ಟು 582 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 180 ಪಂದ್ಯಗಳನ್ನು ಗೆದ್ದಿದ್ದರೆ, 179 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 222 ಪಂದ್ಯಗಳು ಡ್ರಾ ಆಗಿವೆ.

Pic credit: Google

ಭಾರತ ಮತ್ತು ಇಂಗ್ಲೆಂಡ್ 136 ಟೆಸ್ಟ್ ಪಂದ್ಯಗಳನ್ನು ಆಡಿವೆ. ಇದರಲ್ಲಿ 35 ಪಂದ್ಯಗಳಲ್ಲಿ ಗೆಲುವು, 51 ಪಂದ್ಯಗಳಲ್ಲಿ ಸೋಲು ಕಂಡಿದೆ. 50 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

Pic credit: Google

ಆಸ್ಟ್ರೇಲಿಯಾ ವಿರುದ್ಧ 107 ಪಂದ್ಯಗಳನ್ನಾಡಿರುವ ಭಾರತ 32ರಲ್ಲಿ ಗೆದ್ದು 45ರಲ್ಲಿ ಸೋತಿದೆ. ಉಳಿದ 29 ಪಂದ್ಯಗಳು ಡ್ರಾ ಆಗಿವೆ.

Pic credit: Google

ನ್ಯೂಜಿಲೆಂಡ್ ವಿರುದ್ಧ 63 ಪಂದ್ಯಗಳನ್ನು ಆಡಿರುವ ಭಾರತ 22ಪಂದ್ಯಗಳಲ್ಲಿ ಜಯಗಳಿಸಿದ್ದು, 14ರಲ್ಲಿ ಸೋಲನುಭವಿಸಿದೆ. 27 ಪಂದ್ಯಗಳು ಡ್ರಾ ಆಗಿವೆ.

Pic credit: Google

ಭಾರತ ಒಟ್ಟು 44 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿದೆ. ಇದರಲ್ಲಿ 16ಪಂದ್ಯಗಳಲ್ಲಿ ಗೆದ್ದು, 18ಪಂದ್ಯಗಳಲ್ಲಿ ಸೋತಿದೆ. 10 ಪಂದ್ಯಗಳು ಡ್ರಾ ಆಗಿವೆ.

Pic credit: Google

ಭಾರತ ಮತ್ತು ಪಾಕಿಸ್ತಾನ ನಡುವೆ 59 ಟೆಸ್ಟ್‌ಗಳು ನಡೆದಿದ್ದು, ಇದರಲ್ಲಿ ಭಾರತ 9ರಲ್ಲಿ ಗೆಲುವು ಸಾಧಿಸಿದ್ದು, 12ರಲ್ಲಿ ಸೋಲು ಕಂಡಿದೆ. 38 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

Pic credit: Google

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ 15 ಪಂದ್ಯಗಳನ್ನಾಡಿದ್ದು, 13ರಲ್ಲಿ ಗೆಲುವು ಸಾಧಿಸಿದೆ. ಉಳಿದ ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.

Pic credit: Google

ವೆಸ್ಟ್ ಇಂಡೀಸ್ ವಿರುದ್ಧದ ಒಟ್ಟು 100 ಪಂದ್ಯಗಳನ್ನಾಡಿರುವ ಭಾರತ, 23 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 30 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 47 ಪಂದ್ಯಗಳು ಡ್ರಾ ಆಗಿವೆ.

Pic credit: Google

ಭಾರತ ಮತ್ತು ಶ್ರೀಲಂಕಾ ನಡುವೆ 46 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 22 ಪಂದ್ಯಗಳಲ್ಲಿ ಗೆದ್ದು, 7ಪಂದ್ಯಗಳಲ್ಲಿ ಸೋಲು ಕಂಡಿದೆ. 17 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.