ವಿಶ್ವ ಚಾಂಪಿಯನ್ ಗುಕೇಶ್ ಜೇಬಿಗೆ 4.67 ಕೋಟಿ ರೂ. ಕತ್ತರಿ..!

18 December 2024

Pic credit: Google

ಪೃಥ್ವಿ ಶಂಕರ

ಭಾರತದ ಡಿ ಗುಕೇಶ್ ಅವರು ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಆಟಗಾರ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಕೇವಲ 18 ನೇ ವಯಸ್ಸಿನಲ್ಲೇ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದರು.

Pic credit: Google

ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದಕ್ಕಾಗಿ ಗುಕೇಶ್ 1.3 ಮಿಲಿಯನ್ ಡಾಲರ್ ಅಂದರೆ ಸುಮಾರು 11 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ.

Pic credit: Google

ಆದರೆ 11 ಕೋಟಿ ರೂ. ಬಹುಮಾನದ ಮೊತ್ತದಲ್ಲಿ 3 ರಿಂದ 4.67 ಕೋಟಿ ರೂ. ಹಣವನ್ನು ಗುಕೇಶ್ ಭಾರತ ಸರ್ಕಾರಕ್ಕೆ ತೆರಿಗೆಯಾಗಿ ಪಾವತಿಸಬೇಕಾಗುತ್ತದೆ.

Pic credit: Google

ಗುಕೇಶ್ ಅವರು ಒಲಿಂಪಿಕ್ ಅಸೋಸಿಯೇಷನ್ ​​ಅಥವಾ ಭಾರತ ಸರ್ಕಾರದಿಂದ ಬಹುಮಾನದ ಹಣವನ್ನು ಪಡೆದಿಲ್ಲ. ಈ ಎರಡೂ ಆದಾಯದ ಮೇಲೆ ಆಟಗಾರರಿಗೆ ತೆರಿಗೆ ವಿನಾಯಿತಿ ಇದೆ.

Pic credit: Google

ಆದರೆ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದಿರುವ ಹಣಕ್ಕೆ ಇದೀಗ ಗುಕೇಶ್ ತೆರಿಗೆ ಪಾವತಿಸಬೇಕಾಗುತ್ತದೆ. ಆ ಪ್ರಕಾರ ಅವರು 30 ಪ್ರತಿಶತದವರೆಗೆ ತೆರಿಗೆ ಪಾವತಿಸಬೇಕಾಗುತ್ತದೆ.

Pic credit: Google

ಇದರರ್ಥ ಗುಕೇಶ್ 3 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಹೆಚ್ಚುವರಿ ಶುಲ್ಕದೊಂದಿಗೆ ತೆರಿಗೆ ಮೊತ್ತವು 4.67 ರೂ.ಗೆ ತಲುಪುತ್ತದೆ ಎಂದು ಹೇಳಲಾಗುತ್ತಿದೆ.

Pic credit: Google

ವರದಿ ಪ್ರಕಾರ ಗುಕೇಶ್ ಅವರ ಒಟ್ಟು ಆಸ್ತಿ 10 ಕೋಟಿ ರೂ. ಎಂದು ಹೇಳಲಾಗುತ್ತದೆ. ಈ ಗೆಲುವಿನ ನಂತರ, ಅವರ ನಿವ್ವಳ ಮೌಲ್ಯವು ಇನ್ನಷ್ಟು ಹೆಚ್ಚಾಗಿದೆ.

Pic credit: Google