ಟೀಂ ಇಂಡಿಯಾದಲ್ಲಿ ಧೋನಿಯ ಮೊದಲ ಸಂಭಾವನೆ ಎಷ್ಟು ಗೊತ್ತಾ?

07 July 2024

Pic credit - Google

ಪೃಥ್ವಿಶಂಕರ

Pic credit -  Google

ಇಂದು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ 43 ನೇ ಹುಟ್ಟುಹಬ್ಬವನ್ನು ದೇಶಾದ್ಯಂತ ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ.

ಜನ್ಮ ದಿನ

Pic credit -  Google

ಧೋನಿಯಂತೆ ಆರಾಧ್ಯ ಧೈವದಂತೆ ಕಾಣುವ ಅವರ ಅಭಿಮಾನಿಗಳು ಧೋನಿಯ ಬಗ್ಗೆ ಬಹುತೇಕ ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ. ಆದರೆ ಅವರ ಮೊದಲ ಸಂಬಳ ಎಷ್ಟು ಎಂಬುದು ಹಲವರಿಗೆ ಗೊತ್ತಿಲ್ಲ.

ಎಂ ಎಸ್ ಧೋನಿ

Pic credit -  Google

ಕ್ರಿಕೆಟ್​ನಿಂದಾಗಿ ಸುಮಾರು 1040 ಕೋಟಿ ರೂಪಾಯಿ ನಿವ್ವಳ ಮೌಲ್ಯ ಹೊಂದಿರುವ ಧೋನಿ ಅವರ ಮೊದಲ ಸಂಭಾವನೆ ಎಷ್ಟು ಎಂದು ಗೊತ್ತಾದರೆ ಎಲ್ಲರೂ ಅಚ್ಚರಿ ಪಡುತ್ತೀರಿ.

1040 ಕೋಟಿ ಆಸ್ತಿ

Pic credit -  Google

ಧೋನಿ ಡಿಸೆಂಬರ್ 2004 ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು

2004 ರಲ್ಲಿ ಪದಾರ್ಪಣೆ

Pic credit -  Google

ಆಗ ಭಾರತದ ಆಟಗಾರರು ವಿದೇಶದಲ್ಲಿ ಒಂದು ಏಕದಿನ ಪಂದ್ಯ ಆಡುವುದಕ್ಕೆ 1 ಲಕ್ಷ 85 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.

ಮೊದಲ ಸಂಬಳ

Pic credit -  Google

ಅಂದರೆ ಧೋನಿ ತಾವು ಆಡಿದ ಮೊದಲ ಪಂದ್ಯಕ್ಕೆ 1.85 ಲಕ್ಷ ರೂ. ಸಂಭಾವನೆ ಪಡೆದಿದ್ದರು.

1.85 ಲಕ್ಷ ಸಂಬಳ

Pic credit -  Google

ಒಂದು ವರ್ಷದ ನಂತರ ಅಂದರೆ ಡಿಸೆಂಬರ್ 2005 ರಲ್ಲಿ ಧೋನಿಗೆ ಬಿಸಿಸಿಐ ಮೊದಲ ಬಾರಿಗೆ ಕೇಂದ್ರ ಗುತ್ತಿಗೆಯನ್ನು ನೀಡಿತು.

2005 ರಲ್ಲಿ ಗುತ್ತಿಗೆ

Pic credit -  Google

ಆ ಸಮಯದಲ್ಲಿ ಕೇವಲ 3 ಗ್ರೇಡ್‌ಗಳಿದ್ದವು. ಅದರಂತೆ ಧೋನಿ ಬಿ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದರು.

3 ಗ್ರೇಡ್ಸ್ ಮಾತ್ರ

Pic credit -  Google

ಇದರ ಪ್ರಕಾರ ಧೋನಿ ವರ್ಷಕ್ಕೆ 35 ಲಕ್ಷ ರೂ. ವೇತನ ಪಡೆಯುತ್ತಿದ್ದರು.

35 ಲಕ್ಷ ವೇತನ