IND vs ZIM: ಬಲಿಷ್ಠ ಭಾರತವನ್ನು ಮಣಿಸಿದ ಜಿಂಬಾಬ್ವೆ ಕ್ರಿಕೆಟಿಗರ ಸಂಬಳ ಇಷ್ಟು ಕಡಿಮೆನಾ?

07 July 2024

Pic credit - BCCI twitter

ಪೃಥ್ವಿಶಂಕರ

Pic credit -  BCCI

ನಿನ್ನೆಯಿಂದ ಭಾರತ ಹಾಗೂ ಜಿಂಬಾಬ್ವೆ ನಡುವೆ ಐದು ಪಂದ್ಯಗಳ ಟಿ20 ಸರಣಿ ಹರಾರೆಯಲ್ಲಿ ಆರಂಭವಾಗಿದೆ.

ಭಾರತ- ಜಿಂಬಾಬ್ವೆ

Pic credit -  BCCI

ಸರಣಿಯ ಮೊದಲ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾವನ್ನು ಮಣಿಸಿದ ಜಿಂಬಾಬ್ವೆ ಗೆಲುವಿನ ಶುಭಾರಂಭ ಮಾಡಿದೆ.

ಜಿಂಬಾಬ್ವೆಗೆ ಗೆಲುವು

Pic credit -  BCCI

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ 20 ಓವರ್​ಗಳಲ್ಲಿ 115 ರನ್ ಕಲೆಹಾಕಿತು.

115 ರನ್ ಟಾರ್ಗೆಟ್

Pic credit -  BCCI

ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪೆವಿಲಿಯನ್ ಪರೇಡ್ ನಡೆಸಿ ಕೇವಲ 102 ರನ್​ಗಳಿಗೆ ಆಲೌಟ್ ಆಯಿತು.

13 ರನ್ ಸೋಲು

Pic credit -  BCCI

ಅಷ್ಟಕ್ಕೂ ಭಾರತದ ವಿರುದ್ಧ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಜಿಂಬಾಬ್ವೆ ಆಟಗಾರರು ಒಂದು ಟಿ20 ಪಂದ್ಯಕ್ಕೆ ಪಡೆಯುವ ಸಂಬಳ ಕೇಳಿದರೆ ಅಚ್ಚರಿ ಪಡ್ತೀರ.

ಸಂಬಳ ಎಷ್ಟು?

Pic credit -  BCCI

ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ತಂಡದ ಪ್ರತಿಯೊಬ್ಬ ಆಟಗಾರನಿಗೆ ಕೇವಲ 41000 ರೂ. ಸಂಬಳ ನೀಡುತ್ತದೆ.

41000

Pic credit -  BCCI

ಟೀಂ ಇಂಡಿಯಾ ಆಟಗಾರರಿಗೆ ಹೋಲಿಸಿದರೆ ಇದು ತೀರ ಕಡಿಮೆ. ಏಕೆಂದರೆ ಟೀಂ ಇಂಡಿಯಾ ಆಟಗಾರರು ಪ್ರತಿ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.

3 ಲಕ್ಷ ರೂ.