06 July 2024
Pic credit - BCCI twitter
ಪೃಥ್ವಿಶಂಕರ
Pic credit - BCCI
ಟಿ20 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
Pic credit - BCCI
ಹೀಗಾಗಿ ಇವರಿಬ್ಬರ ವಿದಾಯದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ, ಅದರಲ್ಲೂ ಆರಂಭಿಕರ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.
Pic credit - BCCI
ಹಾಗಿದ್ದರೆ, ಈ ಇಬ್ಬರು ದಿಗ್ಗಜರ ಸ್ಥಾನವನ್ನು ತುಂಬುವಂತಹ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..
Pic credit - BCCI
ಶುಭ್‌ಮನ್ ಗಿಲ್ ಅನೇಕ ಸಂದರ್ಭಗಳಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡಿದ್ದಾರೆ. ರೋಹಿತ್-ಕೊಹ್ಲಿ ನಂತರ, ಶುಬ್ಮನ್ ಗಿಲ್ ಅವರು ಟಿ20ಯಲ್ಲಿ ಅವರು ಓಪನಿಂಗ್ ಮಾಡುವುದನ್ನು ಕಾಣಬಹುದು.
Pic credit - BCCI
ಯಶಸ್ವಿ ಜೈಸ್ವಾಲ್ ಮತ್ತು ಗಿಲ್ ಅವರು ಟಿ20ಯಲ್ಲಿ ಟೀಮ್ ಇಂಡಿಯಾದ ಮುಂದಿನ ಆರಂಭಿಕ ಬ್ಯಾಟ್ಸ್‌ಮನ್ ಜೋಡಿಯಾಗಬಹುದು.
Pic credit - BCCI
ರುತುರಾಜ್ ಗಾಯಕ್ವಾಡ್ ಅವರು ಡಿಸೆಂಬರ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆರಂಭಿಕರಾಗಿ ಆಡಿ 223 ರನ್ ಬಾರಿಸಿದ್ದರು. ಹೀಗಾಗಿ ರುತುರಾಜ್ ಕೂಡ ಆರಂಭಿಕ ಸ್ಥಾನಕ್ಕೆ ಸ್ಪರ್ಧಿ
Pic credit - Google
ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಕೂಡ ಐಪಿಎಲ್ ಅಬ್ಬರಿಸಿದ್ದು, ಮುಂಬರುವ ಜಿಂಬಾಬ್ವೆ ಪ್ರವಾಸದಲ್ಲಿ ಅವರು ಮೊದಲ ಬಾರಿಗೆ ಟಿ20 ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ.
Pic credit - Google
ಅಗ್ರ ಬ್ಯಾಟಿಂಗ್ ಕ್ರಮಾಂಕದಲ್ಲಿ ರೋಹಿತ್-ಕೊಹ್ಲಿ ಬದಲಿಗೆ ಕೆಎಲ್ ರಾಹುಲ್ ಅತ್ಯಂತ ಅನುಭವಿಯಾಗಿದ್ದಾರೆ. ಟಿ20 ವಿಶ್ವಕಪ್ ಆಡದಿದ್ದರೂ ರಾಹುಲ್ ಅನುಭವ ತಂಡಕ್ಕೆ ನೆರವಾಗಲಿದೆ.