05 July 2024
Pic credit - Google
ಪೃಥ್ವಿಶಂಕರ
Pic credit - Google
ಐರ್ಲೆಂಡ್ನ ಗ್ಯಾರಿ ವಿಲ್ಸನ್ ಟಿ20 ವಿಶ್ವಕಪ್‌ನಲ್ಲಿ ಒಟ್ಟು 13 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು ಒಂದೇ ಒಂದು ಸಿಕ್ಸರ್ ಬಾರಿಸದೆ 138 ರನ್ ಬಾರಿಸಿದ್ದರು.
Pic credit - Google
ಸ್ಕಾಟ್ಲೆಂಡ್ನ ಮೆಕ್ಲಿಯೋಡ್ ಕೂಡ ಟಿ20 ವಿಶ್ವಕಪ್‌ನಲ್ಲಿ ಒಟ್ಟು 13 ಪಂದ್ಯಗಳನ್ನು ಆಡಿದ್ದು, ಅವರಿಗೆ ಒಂದೇ ಒಂದು ಸಿಕ್ಸರ್ ಹೊಡೆಯಲು ಸಾಧ್ಯವಾಗಲಿಲ್ಲ.
Pic credit - Google
ನೇಪಾಳದ ಶರದ್ ವೆಸಾವ್ಕರ್ ತಮ್ಮ ವೃತ್ತಿಜೀವನದಲ್ಲಿ 3 ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು ಸಿಕ್ಸರ್ ಬಾರಿಸದೆ 91 ರನ್ ಬಾರಿಸಿದ್ದಾರೆ.
Pic credit - Google
ವೆಸ್ಟ್ ಇಂಡೀಸ್ನ ಡೆವೊನ್ ಸ್ಮಿತ್ ಟಿ20 ವಿಶ್ವಕಪ್‌ನಲ್ಲಿ 2 ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ ಅವರು ಒಂದೇ ಒಂದು ಸಿಕ್ಸರ್ ಬಾರಿಸದೆ 86 ರನ್ ಗಳಿಸಿದರು .
Pic credit - Google
ನೇಪಾಳದ ಪರಸ್ ಖಡ್ಕಾ ಅವರು ಟಿ20 ವಿಶ್ವಕಪ್‌ನ 3 ಪಂದ್ಯಗಳಲ್ಲಿ ಸಿಕ್ಸರ್ ಬಾರಿಸದೆ 83 ರನ್ ಸಿಡಿಸಿದ್ದರು.
Pic credit - Google
ಐರ್ಲೆಂಡ್ನ ಜಾನ್ ಮೂನಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಯಾವುದೇ ಸಿಕ್ಸರ್ ಬಾರಿಸದೆ 82 ರನ್ ಬಾರಿಸಿದ್ದರು.
Pic credit - Google
ವೆಸ್ಟ್ ಇಂಡೀಸ್ನ ದಿನೇಶ್ ರಾಮ್ದಿನ್ ಟಿ20 ವಿಶ್ವಕಪ್‌ನಲ್ಲಿ 29 ಪಂದ್ಯಗಳನ್ನು ಆಡಿದ್ದರು. ಆದರೆ ಅವರಿಗೆ ಒಂದೇ ಒಂದು ಸಿಕ್ಸರ್ ಸಿಕ್ಸರ್ ಬಾರಿಸಲು ಸಾಧ್ಯವಾಗಲಿಲ್ಲ.
Pic credit - Google
ಯುಎಇ ತಂಡದ ಖುರ್ರಂ ಖಾನ್ ಅವರು ಟಿ20 ವಿಶ್ವಕಪ್‌ನ 3 ಪಂದ್ಯಗಳಲ್ಲಿ ಸಿಕ್ಸರ್ ಬಾರಿಸದೆ 73 ರನ್ ಗಳಿಸಿದ್ದರು.
Pic credit - Google
ಟಿ20 ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ಒಟ್ಟು 10 ಪಂದ್ಯಗಳನ್ನು ಆಡಿದ್ದು, ಒಂದೇ ಒಂದು ಸಿಕ್ಸರ್ ಬಾರಿಸದೆ 71 ರನ್ ಕಲೆಹಾಕಿದ್ದಾರೆ.