ಟಿ20 ವಿಶ್ವಕಪ್‌ ಟ್ರೋಫಿಯನ್ನು ಸೇರಿಸಬೇಕಾದ ಸ್ಥಳಕ್ಕೆ ಸೇರಿಸಿದ ರೋಹಿತ್; ವಿಡಿಯೋ ನೋಡಿ

05  July 2024

Pic credit - BCCI Twitter Account 

ಪೃಥ್ವಿಶಂಕರ

Pic credit - BCCI

ಜೂನ್ 29 ರಂದು ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟೀಂ ಇಂಡಿಯಾ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಚಾಂಪಿಯನ್

Pic credit - BCCI

ಇದಾದ 4 ದಿನಗಳ ನಂತರ ಅಂದರೆ ಜುಲೈ 4 ರಂದು ಟೀಂ ಇಂಡಿಯಾ ಪ್ರತಿಷ್ಠಿತ ಟ್ರೋಫಿಯೊಂದಿಗೆ ಭಾರತಕ್ಕೆ ಬಂದಿಳಿದಿತ್ತು.

ತವರಿಗೆ ವಾಪಸ್

Pic credit - BCCI

ಭಾರತಕ್ಕೆ ಬಂದ ನಂತರ ಟೀಂ ಇಂಡಿಯಾ ಟಿ20 ವಿಶ್ವಕಪ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿತು.

ವಿಜಯೋತ್ಸವ

Pic credit - BCCI

ಸಂಭ್ರಮಾಚರಣೆ ವೇಳೆ ಟೀಂ ಇಂಡಿಯಾದ ಆಟಗಾರರು ಟ್ರೋಫಿಯನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು. ಅಭಿಮಾನಿಗಳು ಕೂಡ ಟ್ರೋಫಿಯನ್ನು ಕಣ್ತುಂಬಿಕೊಂಡರು.

ಮೆರವಣಿಗೆ

Pic credit - BCCI

ಇದೀಗ ಟಿ20 ವಿಶ್ವಕಪ್‌ನ ಸಂಭ್ರಮಾಚರಣೆ ಮುಗಿದಿದ್ದು, ನಾಯಕ ರೋಹಿತ್ ಶರ್ಮಾ ಇದೀಗ ಟಿ20 ವಿಶ್ವಕಪ್ ಟ್ರೋಫಿಯನ್ನು ಸೇರಿಸಬೇಕಾದ ಸ್ಥಳಕ್ಕೆ ಸೇರಿಸಿದ್ದಾರೆ.

ರೋಹಿತ್ ಶರ್ಮಾ

Pic credit - BCCI

ರೋಹಿತ್ ಶರ್ಮಾ ಈ ಟ್ರೋಫಿಯನ್ನು ಬಿಸಿಸಿಐಗೆ ಒಪ್ಪಿಸಿದ್ದಾರೆ. ಪ್ರತಿ ಪ್ರಮುಖ ಟ್ರೋಫಿಯನ್ನು ಬಿಸಿಸಿಐನ ಕ್ಯಾಬಿನೆಟ್‌ನಲ್ಲಿ ಇರಿಸಲಾಗುತ್ತದೆ.

ಬಿಸಿಸಿಐಗೆ ಟ್ರೋಫಿ

Pic credit - BCCI

ಅದರಂತೆ ಈ ಟ್ರೋಫಿಯನ್ನು ಬಿಸಿಸಿಐ ತನ್ನಲ್ಲಿ ಇರಿಸಿಕೊಂಡಿದೆ. ಅದರ ವಿಡಿಯೋವನ್ನು ಬಿಸಿಸಿಐ ಇದೀಗ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ವಿಡಿಯೋ ನೋಡಿ