ಅತಿ ಹೆಚ್ಚು ಟಿ20-ಐ ಪಂದ್ಯಗಳನ್ನು ಗೆದ್ದ ನಾಯಕ ಯಾರು ಗೊತ್ತಾ?

01  July 2024

Pic credit - BCCI Twitter Account 

ಪೃಥ್ವಿಶಂಕರ

Pic credit - BCCI

ಪ್ರಸ್ತುತ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕ ಭಾರತದ ರೋಹಿತ್ ಶರ್ಮಾ. ಹೀಗಾಗಿ ಈ ದಾಖಲೆ ಹಿಟ್‌ಮ್ಯಾನ್ ಹೆಸರಿನಲ್ಲಿದೆ.

ರೋಹಿತ್ ನಂ.1

Pic credit - BCCI

ಒಟ್ಟು 62 ಪಂದ್ಯಗಳಲ್ಲಿ ನಾಯಕರಾಗಿರುವ ರೋಹಿತ್ ಶರ್ಮಾ 50 ಪಂದ್ಯಗಳನ್ನು ಗೆದ್ದಿದ್ದಾರೆ. ಸೂಪರ್ ಓವರ್‌ನಲ್ಲಿ ಗೆದ್ದ ಪಂದ್ಯಗಳನ್ನೂ ಇಲ್ಲಿ ಸೇರಿಸಲಾಗಿದೆ.

ರೋಹಿತ್ ಶರ್ಮಾ

Pic credit - Google

ಪಾಕಿಸ್ತಾನದ ಬಾಬರ್ ಆಝಂ ಎರಡನೇ ಸ್ಥಾನದಲ್ಲಿದ್ದು, ಇದುವರೆಗೆ 85 ಪಂದ್ಯಗಳ ನಾಯಕತ್ವ ವಹಿಸಿರುವ ಬಾಬರ್ 48ರಲ್ಲಿ ಗೆಲುವು ಸಾಧಿಸಿದ್ದಾರೆ.

ಬಾಬರ್ ಆಝಂ

Pic credit - Google

ಈ ವಿಷಯದಲ್ಲಿ ಉಗಾಂಡ ತಂಡದ ನಾಯಕ ಬ್ರಿಯಾನ್ ಮಸಾಬಾ ಮೂರನೇ ಸ್ಥಾನದಲ್ಲಿದ್ದು, ಅವರು 60 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, 45 ರಲ್ಲಿ ಗೆದ್ದಿದ್ದಾರೆ.

ಬ್ರಿಯಾನ್ ಮಸಾಬಾ

Pic credit - Google

ಇಂಗ್ಲೆಂಡಿನ ಇಯಾನ್ ಮಾರ್ಗನ್ ಅಂತರಾಷ್ಟ್ರೀಯ ಟಿ20 ವೃತ್ತಿಜೀವನದ ಅವಧಿಯಲ್ಲಿ 71 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದು, 44 ಪಂದ್ಯಗಳನ್ನು ಗೆದ್ದಿದ್ದಾರೆ.

ಇಯಾನ್ ಮಾರ್ಗನ್

Pic credit - Google

ಅಫ್ಘಾನಿಸ್ತಾನದ ಅಸ್ಗರ್ ಅಫ್ಘಾನ್ ಒಟ್ಟು 52 ಅಂತರಾಷ್ಟ್ರೀಯ ಟಿ20 ಪಂದ್ಯಗಳ ನಾಯಕತ್ವ ವಹಿಸಿದ್ದು, ಅವುಗಳಲ್ಲಿ 42 ಪಂದ್ಯಗಳನ್ನು ಗೆದ್ದಿದ್ದಾರೆ.

ಅಸ್ಗರ್ ಅಫ್ಘಾನ್

Pic credit - Google

ಎಂಎಸ್ ಧೋನಿ ತಮ್ಮ ವೃತ್ತಿಜೀವನದಲ್ಲಿ ಒಟ್ಟು 72 ಅಂತರಾಷ್ಟ್ರೀಯ ಟಿ20 ಪಂದ್ಯಗಳ ನಾಯಕತ್ವ ವಹಿಸಿದ್ದು, ಅದರಲ್ಲಿ 42 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಎಂಎಸ್ ಧೋನಿ

Pic credit - Google

ಆಸ್ಟ್ರೇಲಿಯದ ಆರೋನ್ ಫಿಂಚ್ 76 ಅಂತರಾಷ್ಟ್ರೀಯ ಟಿ20 ಪಂದ್ಯಗಳ ಸಾರಥ್ಯ ವಹಿಸಿದ್ದು, 41 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋನ್ ಫಿಂಚ್