ಟೆಸ್ಟ್ ಶ್ರೇಯಾಂಕ; ಟಾಪ್ 10 ರಿಂದ ಹೊರಬಿದ್ದ ಬಾಬರ್
4 september 2024
Pic credit: Facebook
ಪೃಥ್ವಿ ಶಂಕರ
Pic credit: Facebook
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಮುಗಿದಿದೆ. ಇದರೊಂದಿಗೆ ಐಸಿಸಿ ನೂತನ ಶ್ರೇಯಾಂಕ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.
Pic credit: Facebook
ಬಾಂಗ್ಲಾದೇಶ ವಿರುದ್ಧದ ಸೋಲಿನ ನಂತರ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆಯಾಗಿದೆ. ಟೆಸ್ಟ್ ಶ್ರೇಯಾಂಕದಲ್ಲಿ ಬಾಬರ್ ಅಜಮ್ ಟಾಪ್ 10 ರಿಂದ ಹೊರಬಿದ್ದಿದ್ದಾರೆ.
Pic credit: Facebook
ಹೊಸ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡಿರುವ ಅವರು ಇದೀಗ 12ನೇ ಸ್ಥಾನಕ್ಕೆ ತಲುಪಿದ್ದಾರೆ.
Pic credit: Facebook
ಬಾಬರ್ ಅವರು ದೀರ್ಘಕಾಲದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಫಲರಾಗಿರುವುದೇ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ರಿಂದ ಹೊರಬೀಳಲು ಕಾರಣ ಎಂದು ಹೇಳಲಾಗುತ್ತಿದೆ.
Pic credit: Facebook
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಬಾಬರ್ ರನ್ ಗಳಿಸುವ ನಿರೀಕ್ಷೆಯೂ ಇತ್ತು. ಆದರೆ, ಆಡಿದ 4 ಇನ್ನಿಂಗ್ಸ್‌ಗಳಲ್ಲಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.
Pic credit: Facebook
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡಿದ 2 ಟೆಸ್ಟ್‌ಗಳ 4 ಇನ್ನಿಂಗ್ಸ್‌ಗಳಲ್ಲಿ ಬಾಬರ್ ಕೇವಲ 64 ರನ್ ಗಳಿಸಿಲಷ್ಟೇ ಶಕ್ತರಾಗಿದ್ದರು.
Pic credit: Facebook
ಬಾಬರ್ ಮಾತ್ರವಲ್ಲದೆ ಪಾಕಿಸ್ತಾನ ತಂಡ ಕೂಡ ಐಸಿಸಿ ಟೆಸ್ಟ್ ತಂಡಗಳ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.
Pic credit: Facebook
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಪಾಕ್ ತಂಡ 6ನೇ ಸ್ಥಾನದಲ್ಲಿತ್ತು. ಆದರೆ ಸರಣಿ ಸೋತ ಬಳಿಕ ಪಾಕ್ ತಂಡ 2 ಸ್ಥಾನಗಳನ್ನು ಕಳೆದುಕೊಂಡಿದೆ.
ರೋಹಿತ್ ಮೇಲೆ ಲಕ್ನೋ ಕಣ್ಣು; ಖಚಿತಪಡಿಸಿದ ಕೋಚ್