ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ವಿಶ್ವಕಪ್ 18 ನೇ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದರು

20 October 2023

ಡೇವಿಡ್ ವಾರ್ನರ್ ಕೇವಲ 85 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು.

ಇದು ವಿಶ್ವಕಪ್‌ನಲ್ಲಿ ವಾರ್ನರ್ ಅವರ ಐದನೇ ಶತಕವಾಗಿದ್ದು, ಈ ಮೂಲಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದರು.

ಈ ಶತಕದೊಂದಿಗೆ ವಾರ್ನರ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ.

ಅಂದಹಾಗೆ, ಪಾಂಟಿಂಗ್ ಕೂಡ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಸಿಡಿಸಿದ್ದಾರೆ.

ಡೇವಿಡ್ ವಾರ್ನರ್ ಪಾಕಿಸ್ತಾನದ ವಿರುದ್ಧ ಸತತ ನಾಲ್ಕನೇ ಏಕದಿನ ಶತಕ ದಾಖಲಿಸಿದರು.

ಈ ತಂಡದ ವಿರುದ್ಧ ಕಳೆದ 3 ಏಕದಿನ ಇನ್ನಿಂಗ್ಸ್‌ಗಳಲ್ಲಿ ವಾರ್ನರ್ 130, 179, 107 ರನ್ ಸಿಡಿಸಿದ್ದರು.

ಡೇವಿಡ್ ವಾರ್ನರ್ ಕೇವಲ 10 ರನ್‌ಗಳಲ್ಲಿದ್ದಾಗ ನೀಡಿದ್ದ ಸುಲಭ ಕ್ಯಾಚ್ ಅನ್ನು ಉಸಾಮಾ ಮಿರ್ ಕೈಬಿಟ್ಟರು.

ಜೀವದಾನದ ಲಾಭ ಪಡೆದ ವಾರ್ನರ್, ಶತಕ ಬಾರಿಸಿದ ನಂತರ ಪುಷ್ಪ ಚಿತ್ರದ ಸ್ಟೈಲ್​ನಲ್ಲಿ ಸಂಭ್ರಮಾಚರಣೆ ಮಾಡಿದರು.