ಬೆಂಗಳೂರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಆಸೀಸ್ ಆರಂಭಿಕರಿಬ್ಬರು ಶತಕ ಸಿಡಿಸಿದ್ದಾರೆ.

20 October 2023

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ಪರ ಈ ಇಬ್ಬರು 259 ರನ್​ಗಳ ಜೊತೆಯಾಟ ಹಂಚಿಕೊಂಡರು.

31ನೇ ಓವರ್‌ನಲ್ಲಿ ಮೊಹಮ್ಮದ್ ನವಾಜ್ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ವಾರ್ನರ್ ಶತಕ ಪೂರೈಸಿದರು.

ಇದು ವಾರ್ನರ್ ಅವರ 21ನೇ ಏಕದಿನ ಶತಕವಾಗಿದ್ದು, ಅಂತಿಮವಾಗಿ  ವಾರ್ನರ್ 14 ಬೌಂಡರಿ 9 ಸಿಕ್ಸರ್ ಸಹಿತ 163 ರನ್ ಸಿಡಿಸಿ ಔಟಾದರು.

ಆ ಬಳಿಕ ಮಿಚೆಲ್ ಮಾರ್ಷ್ ಕೂಡ ಏಕದಿನದಲ್ಲಿ ತಮ್ಮ ಎರಡನೇ ಶತಕ ಸಿಡಿಸಿದ್ದಾರೆ.

ಮಾರ್ಷ್​ ಅಂತಿಮವಾಗಿ 10 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿ 121 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.

ಒಂದೇ ಪಂದ್ಯದಲ್ಲಿ ಇಬ್ಬರು ಆರಂಭಿಕ ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದು ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲು.