2023ರ ವಿಶ್ವಕಪ್‌ ಐದನೇ ಪಂದ್ಯದಲ್ಲಿ ಅವಕಾಶ ಪಡೆದ ಶಮಿ 5 ವಿಕೆಟ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

23 October 2023

ಮೊಹಮ್ಮದ್ ಶಮಿ ನ್ಯೂಜಿಲೆಂಡ್ ವಿರುದ್ಧ 54 ರನ್ ನೀಡಿ 5 ವಿಕೆಟ್ ಕಬಳಿಸಿ ಪಂದ್ಯದ ಆಟಗಾರರೂ ಆದರು.

ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಎನಿಸಿದರೂ ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಮತ್ತೊಮ್ಮೆ ಬೆಂಚ್ ಮೇಲೆ ಕೂರುವ ಸಾಧ್ಯತೆ ಇದೆ.

ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮುಂದಿನ ಪಂದ್ಯವನ್ನು ಆಡಬೇಕಿದೆ. ಅಲ್ಲಿ ರೋಹಿತ್ ಶರ್ಮಾ ಆಡುವ ಹನ್ನೊಂದರಲ್ಲಿ ಎರಡು ಬದಲಾವಣೆ ಮಾಡಬಹುದಾಗಿದೆ.

ಸೂರ್ಯಕುಮಾರ್ ಯಾದವ್ ರೂಪದಲ್ಲಿ ಮೊದಲ ಬದಲಾವಣೆಯಾಗಲಿದ್ದು, ಹಾರ್ದಿಕ್ ಪಾಂಡ್ಯ ಫಿಟ್ ಆಗಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲ್ಲಿದ್ದಾರೆ.

ಲಕ್ನೋದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಅಶ್ವಿನ್ ಆಡಿಸುವ ಸಾಧ್ಯತೆ ಹೆಚ್ಚಿದೆ. ಅಂದರೆ ಕೇವಲ ಇಬ್ಬರು ವೇಗಿಗಳೊಂದಿಗೆ ತಂಡ ಕಣಕ್ಕಿಳಿಯಲಿದೆ.

ಒಂದು ವೇಳೆ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದರೆ, ಶಮಿ ಅಥವಾ ಸಿರಾಜ್ ಬೆಂಚ್ ಕಾಯಬೇಕಾಗುತ್ತದೆ.

ಸಿರಾಜ್ ತಂಡದ 2ನೇ ವೇಗದ ಬೌಲರ್ ಆಗಿರುವುದರಿಂದ ಅವರನ್ನು ಆಡಿಸುವುದು ಖಚಿತ. ಹೀಗಾಗಿ ಶಮಿ ಬೆಂಚ್ ಕಾಯಬೇಕಾಗಬಹುದಾಗಿದೆ.