2023ರ ವಿಶ್ವಕಪ್‌ನಲ್ಲಿ ಬುಧವಾರ ಆಸ್ಟ್ರೇಲಿಯಾ ತಂಡ ನೆದರ್ಲೆಂಡ್ಸ್‌ ತಂಡವನ್ನು 309 ರನ್‌ಗಳಿಂದ ಸೋಲಿಸಿತು.

26 October 2023

ಟೂರ್ನಿಯಲ್ಲಿ ಮೂರನೇ ಜಯ ಸಾಧಿಸಿದ ಆಸೀಸ್​ಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಗೆಲುವಾಗಿದೆ.

ಇನ್ನು ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ನಿವ್ವಳ ರನ್ ರೇಟ್ ಮೈನಸ್​ನಿಂದ ಪ್ಲಸ್​ಗೆ ಏರಿದೆ.

ಖಾತೆಯಲ್ಲಿ 6 ಅಂಕ ಹೊಂದಿರುವ ಪ್ಯಾಟ್ ಕಮಿನ್ಸ್ ನೇತೃತ್ವದ ಕಾಂಗರೂ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಆದರೆ ಆಸ್ಟ್ರೇಲಿಯಾದ ಗೆಲುವಿನಿಂದ ಶ್ರೀಲಂಕಾ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಲಾ ಒಂದು ಸ್ಥಾನ ಕಳೆದುಕೊಂಡಿವೆ.

ಅದೇ ಸಮಯದಲ್ಲಿ, ನೆದರ್ಲೆಂಡ್ಸ್ ಏಳನೇ ಸ್ಥಾನದಿಂದ ನೇರವಾಗಿ 10ನೇ ಸ್ಥಾನಕ್ಕೆ ಜಾರಿದೆ.

ತನ್ನ ಎಲ್ಲಾ ಪಂದ್ಯಗಳಲ್ಲಿ ಗೆದ್ದಿರುವ ಭಾರತ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ಎರಡನೇ ಮತ್ತು ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ. ಉಭಯ ತಂಡಗಳು ತಲಾ ಎಂಟು ಅಂಕ ಹೊಂದಿದೆ. ಆದರೆ ಆಫ್ರಿಕಾದ ನಿವ್ವಳ ರನ್ ರೇಟ್ ಉತ್ತಮವಾಗಿದೆ.

ಪಾಕಿಸ್ತಾನ ತಂಡ ಮತ್ತು ಅಫ್ಘಾನಿಸ್ತಾನ ಐದು ಮತ್ತು ಆರನೇ ಸ್ಥಾನದಲ್ಲಿವೆ. ಇಬ್ಬರ ಖಾತೆಯಲ್ಲಿ ನಾಲ್ಕು ಅಂಕಗಳಿವೆ.