ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಬಂದಿದ್ದ ಪಾಕಿಸ್ತಾನ ಕ್ರಿಕೆಟ್​ ತಂಡ ಇಂದು ಅಂದರೆ, ನವೆಂಬರ್ 11 ರಂದು ತನ್ನ ದೇಶಕ್ಕೆ ವಾಪಸ್ಸಾಗಲಿದೆ.

11 November 2023

ಕಳೆದ ಸೆಪ್ಟೆಂಬರ್‌ 27 ರಂದು ಹೈದರಾಬಾದ್​ಗೆ ಬಂದಿಳಿದಿದ್ದ ಬಾಬರ್ ಪಡೆ ಬರೋಬ್ಬರಿ ಒಂದೂವರೆ ತಿಂಗಳು ಭಾರತದ ಆತಿಥ್ಯ ಅನುಭವಿಸಿದೆ.

ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಪಾಕಿಸ್ತಾನ ತಂಡ ಏಕದಿನ ವಿಶ್ವಕಪ್​ ಅಭಿಯಾನ ಆರಂಭಿಸಿತ್ತು.

ಇದೀಗ ನವೆಂಬರ್ 11 ರಂದು ಇಂಗ್ಲೆಂಡ್ ವಿರುದ್ಧ ಪಂದ್ಯ ತನ್ನ ಕೊನೆಯ ವಿಶ್ವಕಪ್ ಪಂದ್ಯವನ್ನು ಆಡುವುದರೊಂದಿಗೆ ತನ್ನ ಪಯಣವನ್ನು ಮುಗಿಸುತ್ತಿದೆ.

ಇನ್ನು ಈ ವಿಶ್ವಕಪ್​ನ ಲೀಗ್ ಹಂತದಲ್ಲಿ 8 ಪಂದ್ಯಗಳನ್ನಾಡಿರುವ ಪಾಕಿಸ್ತಾನ ಇದರಲ್ಲಿ 4 ಗೆಲುವು ಹಾಗೂ 4 ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿರುವ ಪಾಕ್, ಈ ಪಂದ್ಯವನ್ನು ಗೆದ್ದರೂ ಸಹ ಸೆಮಿಫೈನಲ್‌ ಆಡುವುದು ಅಸಾಧ್ಯ.

ಹೀಗಾಗಿ ವಿಶ್ವಕಪ್ ಆಡಲು ಭಾರತಕ್ಕೆ ಬಂದಿದ್ದ ಪಾಕಿಸ್ತಾನ ತಂಡ ಇಂದಿನ ಕೊನೆಯ ಲೀಗ್ ಪಂದ್ಯ ಮುಗಿದ ಬಳಿಕ ದುಬೈ ಮಾರ್ಗವಾಗಿ ಪಾಕಿಸ್ತಾನಕ್ಕೆ ವಾಪಸ್ಸಾಗಲಿದೆ.