ಏಕದಿನ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಬಾರಿ ಸೆಮಿಫೈನಲ್ ತಲುಪಿದ ತಂಡಗಳ ಪಟ್ಟಿ ಇಲ್ಲಿದೆ.

10 November 2023

ಆಸ್ಟ್ರೇಲಿಯಾ 9 ಬಾರಿ ವಿಶ್ವಕಪ್ ಸೆಮಿಫೈನಲ್ ತಲುಪಿದ್ದು, 1975, 1987, 1996, 1999, 2003, 2007, 2015, 2019, 2023 ರಲ್ಲಿ ಈ ಸಾಧನೆ ಮಾಡಿದೆ.

ನ್ಯೂಜಿಲೆಂಡ್ ತಂಡ 1975, 1979, 1992, 1999, 2007, 2011, 2015, 2019, 2023 ರಲ್ಲಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದಿದೆ.

ಭಾರತ 8 ಬಾರಿ ವಿಶ್ವಕಪ್ ಸೆಮಿಫೈನಲ್ ತಲುಪಿದ್ದು, 1983, 1987, 1996, 2003, 2011, 2015, 2019, 2023 ರಲ್ಲಿ ಸೆಮಿಫೈನಲ್‌ ಆಡಿದೆ.

ಇಂಗ್ಲೆಂಡ್ ತಂಡ1975, 1979, 1983, 1987, 1992, 2019 ರಲ್ಲಿ ಒಟ್ಟು  6 ಬಾರಿ ವಿಶ್ವಕಪ್ ಸೆಮಿಫೈನಲ್ ತಲುಪಿದೆ.

ಪಾಕಿಸ್ತಾನ ತಂಡ ಕೂಡ 1979, 1983, 1987, 1992, 1999, 2011 ರಲ್ಲಿ ಒಟ್ಟು 6 ಬಾರಿ ವಿಶ್ವಕಪ್ ಸೆಮಿಫೈನಲ್ ತಲುಪಿದೆ.

ದಕ್ಷಿಣ ಆಫ್ರಿಕಾ 5 ಬಾರಿ ವಿಶ್ವಕಪ್ ಸೆಮಿಫೈನಲ್ ತಲುಪಿದ್ದು, 1992, 1999, 2007, 2015, 2023 ರಲ್ಲಿ ಸೆಮಿಸ್ ಆಡಿದೆ.

ವೆಸ್ಟ್ ಇಂಡೀಸ್ ತಂಡ 4 ಬಾರಿ ಅಂದರೆ 1975, 1979, 1983, 1996 ರಲ್ಲಿ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದೆ.

ಶ್ರೀಲಂಕಾ 4 ಬಾರಿ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಆಡಿದ್ದು, 1996, 2003, 2007, 2011 ರಲ್ಲಿ ಈ ಸಾಧನೆ ಮಾಡಿದೆ.

ಕೀನ್ಯಾ ತಂಡ ಒಮ್ಮೆ ಮಾತ್ರ ಅಂದರೆ 2003 ರಲ್ಲಿ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಆಡಿದೆ.