ವಿಶ್ವಕಪ್ ಇತಿಹಾಸದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಆಟಗಾರ ಪಟ್ಟಿ ಇಲ್ಲಿದೆ

10 November 2023

ಸಚಿನ್ ತೆಂಡೂಲ್ಕರ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 31 ಇನ್ನಿಂಗ್ಸ್‌ಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 1767 ರನ್ ಬಾರಿಸಿದ್ದಾರೆ.

ರೋಹಿತ್ ಶರ್ಮಾ ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ 25 ಇನ್ನಿಂಗ್ಸ್‌ಗಳಲ್ಲಿ 1420 ರನ್ ಸಿಡಿಸಿದ್ದಾರೆ.

ಡೇವಿಡ್ ವಾರ್ನರ್ ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ ಕೇವಲ 25 ಇನ್ನಿಂಗ್ಸ್‌ಗಳಲ್ಲಿ 1417 ರನ್ ಕಲೆ ಹಾಕಿದ್ದಾರೆ.

ಕ್ರಿಸ್ ಗೇಲ್ ಏಕದಿನ ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 34 ಇನ್ನಿಂಗ್ಸ್‌ಗಳಲ್ಲಿ 1186 ರನ್ ಗಳಿಸಿದ್ದಾರೆ.

ಸನತ್ ಜಯಸೂರ್ಯ ಅವರು ಏಕದಿನ ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 32 ಇನ್ನಿಂಗ್ಸ್‌ಗಳಲ್ಲಿ 1091 ರನ್ ಬಾರಿಸಿದ್ದಾರೆ.

ಆಡಮ್ ಗಿಲ್‌ಕ್ರಿಸ್ಟ್ ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 31 ಇನ್ನಿಂಗ್ಸ್‌ಗಳಲ್ಲಿ 1085 ರನ್ ಸಿಡಿಸಿದ್ದಾರೆ.

ಕ್ವಿಂಟನ್ ಡಿ ಕಾಕ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ವಿಶ್ವಕಪ್‌ನಲ್ಲಿ ಇದುವರೆಗೆ 25 ಇನ್ನಿಂಗ್ಸ್‌ಗಳಲ್ಲಿ 1000 ರನ್ ಕಲೆ ಹಾಕಿದ್ದಾರೆ.

ಮಾರ್ಟಿನ್ ಗಪ್ಟಿಲ್ ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 27 ಇನ್ನಿಂಗ್ಸ್‌ಗಳಲ್ಲಿ 995 ರನ್ ಬಾರಿಸಿದ್ದಾರೆ.

ಮ್ಯಾಥ್ಯೂ ಹೇಡನ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ವಿಶ್ವಕಪ್‌ನಲ್ಲಿ 21 ಇನ್ನಿಂಗ್ಸ್‌ಗಳಲ್ಲಿ 987 ರನ್ ಸಿಡಿಸಿದ್ದಾರೆ.

ಸಯೀದ್ ಅನ್ವರ್ ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 21 ಇನ್ನಿಂಗ್ಸ್‌ಗಳಲ್ಲಿ 915 ರನ್ ಗಳಿಸಿದ್ದರು.