ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10000 ರನ್, 200ಕ್ಕೂ ಅಧಿಕ ವಿಕೆಟ್ ಪಡೆದಿರುವ ಆಟಗಾರರ ಪಟ್ಟಿ ಇಲ್ಲಿದೆ.

09 November 2023

ಶೇನ್ ವ್ಯಾಟ್ಸನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10950 ರನ್ ಬಾರಿಸಿದ್ದು, ಮೂರು ಮಾದರಿಗಳಲ್ಲಿ 291 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಶಾಹಿದ್ ಅಫ್ರಿದಿ ಮೂರು ಮಾದರಿಗಳಲ್ಲಿ 11196 ರನ್ ಹಾಗೂ 541 ವಿಕೆಟ್‌ಗಳನ್ನು ಪಡೆದಿದ್ದಾರೆ.

ವೆಸ್ಟ್ ಇಂಡೀಸ್​ನ ಕಾರ್ಲ್ ಹೂಪರ್ 11523 ರನ್ ಮತ್ತು 307 ವಿಕೆಟ್‌ಗಳನ್ನು ಪಡೆದಿದ್ದಾರೆ.

ಶೋಯೆಬ್ ಮಲಿಕ್ ಮೂರು ಮಾದರಿಗಳಲ್ಲಿ 11867 ರನ್ ಮತ್ತು 208 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೊಹಮ್ಮದ್ ಹಫೀಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12780 ರನ್ ಹಾಗೂ 253 ವಿಕೆಟ್ ಪಡೆದಿದ್ದಾರೆ.

ಶಕೀಬ್ ಅಲ್ ಹಸನ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಎಲ್ಲಾ ಮೂರು ಸ್ವರೂಪಗಳಲ್ಲಿ 14406 ರನ್ ಮತ್ತು 690 ವಿಕೆಟ್ಗಳನ್ನು ಉರುಳಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಟೀವ್ ವಾ 18496 ರನ್ ಗಳಿಸಿದ್ದು 287 ವಿಕೆಟ್​ಗಳನ್ನು ಸಹ ಪಡೆದಿದ್ದಾರೆ.

ಕ್ರಿಸ್ ಗೇಲ್ ಮೂರು ಮಾದರಿಗಳಲ್ಲಿ 19593 ರನ್​ಗಳ ಜೊತೆಗೆ 260 ವಿಕೆಟ್‌ಗಳನ್ನು ಪಡೆದಿದ್ದಾರೆ

ಸನತ್ ಜಯಸೂರ್ಯ ಕೂಡ ಮೂರು ಮಾದರಿಗಳಲ್ಲಿ 25957 ರನ್ ಮತ್ತು 440 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಜಾಕ್ವೆಸ್ ಕಾಲಿಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25534 ರನ್ ಮತ್ತು 577 ವಿಕೆಟ್‌ಗಳನ್ನು ಪಡೆದಿದ್ದಾರೆ.

ಭಾರತದ ಸಚಿನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿದ್ದು, ಅವರು 34357 ರನ್ ಮತ್ತು 201 ವಿಕೆಟ್ಗಳನ್ನು ಉರುಳಿಸಿದ್ದಾರೆ.

ಈ ಪಟ್ಟಿಗೆ ಬೆನ್ ಸ್ಟೋಕ್ಸ್ ಸಹ ಸೇರಿಕೊಂಡಿದ್ದು, ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10081 ರನ್ ಮತ್ತು 297 ವಿಕೆಟ್‌ಗಳನ್ನು ಪಡೆದಿದ್ದಾರೆ.