2023 ರ ವಿಶ್ವಕಪ್‌ನಲ್ಲಿ ಅಜೇಯ ತಂಡವಾಗಿರುವ ಟೀಂ ಇಂಡಿಯಾ ಇದೀಗ ಐಸಿಸಿ ಶ್ರೇಯಾಂಕದಲ್ಲಿಯೂ ತನ್ನ ಪ್ರಾಬಲ್ಯ ಮೆರೆದಿದೆ.
09 November 2023
ಭಾರತ ತಂಡವು ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ 8 ವಿಭಾಗಗಳಲ್ಲಿ ನಂಬರ್ 1 ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಅವುಗಳು ಯಾವುವು ಎಂಬುದರ ವಿವರ ಇಲ್ಲಿದೆ.
ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಬಾಬರ್ ಆಝಂರನ್ನು ಹಿಂದಿಕ್ಕಿರುವ ಶುಭ್‌ಮನ್ ಗಿಲ್ ಅಗ್ರಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.
ಏಕದಿನದಲ್ಲಿ ನಂಬರ್ 1 ಬೌಲರ್ ಕೂಡ ಟೀಂ ಇಂಡಿಯಾದವರೇ ಆಗಿದ್ದಾರೆ. ಶಾಹೀನ್ ಅಫ್ರಿದಿಯನ್ನು ಹಿಂದಿಕ್ಕುವ ಮೂಲಕ ಸಿರಾಜ್ ಅಗ್ರ ಸ್ಥಾನವನ್ನು ಗಳಿಸಿದ್ದಾರೆ.
ನಂಬರ್ 1 ಟೆಸ್ಟ್ ಬೌಲರ್ ಕೂಡ ಟೀಂ ಇಂಡಿಯಾದವರೇ ಆಗಿದ್ದು, ಆರ್ ಅಶ್ವಿನ್ ಸುದೀರ್ಘ ಕಾಲ ಈ ಸ್ಥಾನವನ್ನು ಅಲಂಕರಿಸಿದ್ದಾರೆ.
ವಿಶ್ವದ ನಂಬರ್ 1 ಟೆಸ್ಟ್ ಆಲ್ ರೌಂಡರ್ ಕೂಡ ಟೀಂ ಇಂಡಿಯಾದವರೇ ಆಗಿದ್ದು, ರವೀಂದ್ರ ಜಡೇಜಾ ನಂಬರ್ 1 ಸ್ಥಾನದಲ್ಲಿದ್ದಾರೆ.
ವಿಶ್ವದ ನಂ.1 ಟಿ20 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿದ್ದಾರೆ.
ಭಾರತ ಕ್ರಿಕೆಟ್ ತಂಡ ಏಕದಿನ ಮತ್ತು ಟೆಸ್ಟ್ ಎರಡರಲ್ಲೂ ನಂಬರ್ 1 ಎನಿಸಿಕೊಂಡಿದೆ. ಎರಡೂ ಮಾದರಿಗಳಲ್ಲಿ ಭಾರತವನ್ನು ಹಿಂದಿಕ್ಕುವುದು ಅಸಾಧ್ಯವೆಂದು ತೋರುತ್ತದೆ.
NEXT: ಏಕದಿನ ವಿಶ್ವಕಪ್ ನಲ್ಲಿ ಶತಕ ಸಿಡಿಸಿದ ಹಿರಿಯ ಆಟಗಾರರು