ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿರುವ ಆಸ್ಟ್ರೇಲಿಯದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮೊದಲ ವಿಶ್ವಕಪ್ ಪಂದ್ಯದಲ್ಲೇ ದಾಖಲೆ ಸೃಷ್ಟಿಸಿದ್ದಾರೆ.

28 October 2023

43 ದಿನಗಳ ನಂತರ ಎರಡನೇ ಏಕದಿನ ಪಂದ್ಯವನ್ನು ಆಡಿ ಹೆಡ್, ನ್ಯೂಜಿಲೆಂಡ್ ವಿರುದ್ಧ ಕೇವಲ 59 ಎಸೆತಗಳಲ್ಲಿ ಶತಕ ಪೂರೈಸಿದರು.

6 ಸಿಕ್ಸರ್‌ಗಳನ್ನು ಬಾರಿಸಿದ್ದಲ್ಲದೆ, ಹೆಡ್ ತಮ್ಮ ಶತಕ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳನ್ನು ಸಹ ಸಿಡಿಸಿದರು.

ಇದು ವಿಶ್ವಕಪ್​ನಲ್ಲಿ ಹೆಟ್ ಅವರ ಮೊದಲ ಶತಕವಾಗಿದ್ದರೆ, ಅವರ ಏಕದಿನ ವೃತ್ತಿಜೀವನದ 7 ನೇ ಶತಕವಾಗಿದೆ.

ಈ ಶತಕದೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ 5ನೇ ಆಸೀಸ್ ಬ್ಯಾಟರ್ ಎಂಬ ದಾಖಲೆಯನ್ನು ಬರೆದರು.

ಹೆಡ್​ಗೂ ಮೊದಲು 1983 ರಲ್ಲಿ, ಟ್ರೆವರ್ ಚಾಪೆಲ್, 1987 ರಲ್ಲಿ, ಜೆಫ್ ಮಾರ್ಷ್, 2003 ರಲ್ಲಿ, ಲೇಟ್ ಆಂಡ್ರ್ಯೂ ಸೈಮಂಡ್ಸ್. 2015ರಲ್ಲಿ ಆರನ್ ಫಿಂಚ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು.

ತಮ್ಮ ಇನ್ನಿಂಗ್ಸ್‌ನಲ್ಲಿ, ಟ್ರಾವಿಸ್ ಹೆಡ್ 67 ಎಸೆತಗಳಲ್ಲಿ 162.69 ಸ್ಟ್ರೈಕ್ ರೇಟ್‌ನಲ್ಲಿ 7 ಸಿಕ್ಸರ್‌ ಸಹಿತ 109 ರನ್ ಚಚ್ಚಿದರು.

ಈ ಶತಕದ ಇನ್ನಿಂಗ್ಸ್‌ನಲ್ಲಿ, ಹೆಡ್ ಮೊದಲ ವಿಕೆಟ್‌ಗೆ ವಾರ್ನರ್‌ನೊಂದಿಗೆ 175 ರನ್‌ಗಳ ದೊಡ್ಡ ಪಾಲುದಾರಿಕೆಯನ್ನು ಮಾಡಿದರು.