ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿದ ಪಾಕಿಸ್ತಾನ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಿದಲ್ಲದೆ ಸೆಮಿಫೈನಲ್‌ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ.

01 November 2023

ಇನ್ನು ಪಾಯಿಂಟ್​ ಪಟ್ಟಿಯಲ್ಲಿ ಆಡಿರುವ 6 ಪಂದ್ಯಗಳನ್ನು ಗೆದ್ದಿರುವ ಭಾರತ 12 ಅಂಕ ಮತ್ತು +1.405 ನೆಟ್​ ರನ್​ರೇಟ್​ನೊಂದಿಗೆ ಮೊದಲ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 6 ಪಂದ್ಯಗಳಿಂದ 10 ಅಂಕ ಹಾಗೂ +2.032 ನೆಟ್​ ರನ್​ರೇಟ್ ಹೊಂದಿದೆ.

ನ್ಯೂಜಿಲೆಂಡ್ ತಂಡ 4 ಗೆಲುವು 2 ಸೋಲಿನೊಂದಿಗೆ 8 ಅಂಕ ಹಾಗೂ +1.232 ನೆಟ್​ ರನ್​ರೇಟ್​ನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ಕೂಡ 4 ಗೆಲುವು 2 ಸೋಲಿನೊಂದಿಗೆ 8ಅಂಕ ಹಾಗೂ +0.970 ನೆಟ್​ ರನ್​ರೇಟ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ತಾನ ಅಂಕಪಟ್ಟಿಯಲ್ಲಿ 6 ಅಂಕ ಮತ್ತು -0.024 ನೆಟ್ ರನ್ ರೇಟ್‌ನೊಂದಿಗೆ ಐದನೇ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನ ಕೂಡ 3 ಗೆಲುವು 3 ಸೋಲಿನೊಂದಿಗೆ 6 ಅಂಕ ಹಾಗೂ -0.024 ನೆಟ್​ ರನ್​ರೇಟ್​ನೊಂದಿಗೆ ಆರನೇ ಸ್ಥಾನದಲ್ಲಿದೆ.

ಉಳಿದಂತೆ ಶ್ರೀಲಂಕಾ ಮತ್ತು ನೆದರ್ಲೆಂಡ್ ತಲಾ ಎರಡು ಗೆಲುವಿನೊಂದಿಗೆ 7 ಮತ್ತು 8ನೇ ಸ್ಥಾನ ಪಡೆದುಕೊಂಡಿವೆ.

ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳು ತಲಾ 1 ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ 9 ಮತ್ತು 10ನೇ ಸ್ಥಾನ ಪಡೆದುಕೊಂಡಿವೆ.