ವಿಶ್ವಕಪ್ ಇತಿಹಾಸದಲ್ಲಿ ಇಲ್ಲಿಯವರೆಗೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಗೆದ್ದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.
18 November 2023
ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಮಾರ್ಟಿನ್ ಕ್ರೋವ್ ಅವರು 1992 ರ ವಿಶ್ವಕಪ್‌ನ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಗೆದ್ದಿದ್ದರು.
ಸನತ್ ಜಯಸೂರ್ಯ ಅವರು 1996 ರ ವಿಶ್ವಕಪ್‌ನಲ್ಲಿ 221 ರನ್ ಮತ್ತು 7 ವಿಕೆಟ್ ಪಡೆದು, ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು.
ಲ್ಯಾನ್ಸ್ ಕ್ಲೂಸೆನರ್ 1999 ರ ವಿಶ್ವಕಪ್‌ನಲ್ಲಿ 281 ರನ್ ಮತ್ತು 17 ವಿಕೆಟ್ ಕಬಳಿಸುವ ಮೂಲಕ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
2003 ರ ವಿಶ್ವಕಪ್‌ನಲ್ಲಿ 673 ರನ್ ಕಲೆಹಾಕಿದ್ದ ಸಚಿನ್ ತೆಂಡೂಲ್ಕರ್ ಅವರು ಪಂದ್ಯಾವಳಿಯ ಆಟಗಾರರಾಗಿ ಆಯ್ಕೆಯಾಗಿದ್ದರು.
2007 ರ ವಿಶ್ವಕಪ್‌ನಲ್ಲಿ 26 ವಿಕೆಟ್‌ಗಳನ್ನು ಪಡೆಯುವ ಮೂಲಕ ಗ್ಲೆನ್ ಮೆಕ್‌ಗ್ರಾತ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಗೆದಿದ್ದರು.
ಯುವರಾಜ್ ಸಿಂಗ್ 2011ರ ವಿಶ್ವಕಪ್‌ನಲ್ಲಿ 362 ರನ್ ಮತ್ತು 15 ವಿಕೆಟ್‌ಗಳನ್ನು ಕಬಳಿಸಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ವಿಶ್ವಕಪ್ ಇತಿಹಾಸದಲ್ಲಿ ಇಲ್ಲಿಯವರೆಗೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಗೆದ್ದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.
2015 ರ ವಿಶ್ವಕಪ್‌ನಲ್ಲಿ 22 ವಿಕೆಟ್‌ಗಳನ್ನು ಉರುಳಿಸಿದ್ದ ಮಿಚೆಲ್ ಸ್ಟಾರ್ಕ್, ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
2019 ರ ವಿಶ್ವಕಪ್‌ನಲ್ಲಿ 578 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್ಗೆ ಈ ಪ್ರಶಸ್ತಿ ಒಲಿದಿತ್ತು.
NEXT: ಅತಿ ಹೆಚ್ಚು ಐಸಿಸಿ ಫೈನಲ್ಗಳನ್ನು ಆಡಿದ ಕ್ರಿಕೆಟರ್ ಯಾರು ಗೊತ್ತಾ?