ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್ಗಳಿಂದ ಹೀನಾಯ ಸೋಲನ್ನು ಎದುರಿಸಬೇಕಾಯಿತು.
Pic credit: Google
ಅಡಿಲೇಡ್ನಲ್ಲಿ ನಡೆದ ಈ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಮೂರನೇ ದಿನದಂದು ಭಾರತವನ್ನು 175 ರನ್ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ ಸುಲಭವಾಗಿ ಗುರಿ ಸಾಧಿಸಿತು.
Pic credit: Google
ಈ ಮೂಲಕ ಕೇವಲ 1031 ಎಸೆತಗಳಲ್ಲಿ ಮುಕ್ತಾಯಗೊಂಡ ಈ ಟೆಸ್ಟ್ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅತ್ಯಂತ ಕಡಿಮೆ ಎಸೆತಗಳಲ್ಲಿ ಕೊನೆಗೊಂಡ ಟೆಸ್ಟ್ ಪಂದ್ಯ ಎಂಬ ದಾಖಲೆ ಬರೆಯಿತು. ಇದಕ್ಕೂ ಮುನ್ನ ಈ ದಾಖಲೆ ಇಂದೋರ್ ಟೆಸ್ಟ್ (1135 ಎಸೆತ) ಹೆಸರಿನಲ್ಲಿತ್ತು.
Pic credit: Google
ಇದರ ಜೊತೆಗೆ ನಾಯಕನಾಗಿ, ರೋಹಿತ್ ಶರ್ಮಾ ಸತತ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋಲನ್ನು ಎದುರಿಸಿದ ಕಳಪೆ ದಾಖಲೆಗೆ ಕೊರಳೊಡ್ಡಿದ್ದಾರೆ. ಇದಕ್ಕೂ ಮುನ್ನ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನು ನ್ಯೂಜಿಲೆಂಡ್ ತಂಡ 0-3 ಅಂತರದಿಂದ ಸೋಲಿಸಿತ್ತು.
Pic credit: Google
ರೋಹಿತ್ಗಿಂತ ಮೊದಲು ವಿರಾಟ್ ಕೊಹ್ಲಿ (2020-21) ಮತ್ತು ಎಂಎಸ್ ಧೋನಿ (2011 ಮತ್ತು 2014) ಸತತ 4 ಟೆಸ್ಟ್ಗಳಲ್ಲಿ ಸೋತಿದ್ದರು.
Pic credit: Google
ಮತ್ತೊಂದೆಡೆ, ಪ್ಯಾಟ್ ಕಮ್ಮಿನ್ಸ್ ಈಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಬರೆದಿದ್ದಾರೆ. ಕಮ್ಮಿನ್ಸ್ ತಮ್ಮ 18ನೇ ಗೆಲುವಿನೊಂದಿಗೆ ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ (17) ಅವರನ್ನು ಹಿಂದಿಕ್ಕಿದ್ದಾರೆ.
Pic credit: Google
ಈ ಗೆಲುವಿನೊಂದಿಗೆ, ಅಡಿಲೇಡ್ನಲ್ಲಿ ನಡೆದ ಡೇ-ನೈಟ್ ಟೆಸ್ಟ್ನಲ್ಲಿ ಗೆಲುವು ಸಾಧಿಸುವುದರೊಂದಿಗೆ ಆಸ್ಟ್ರೇಲಿಯಾ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಅಡಿಲೇಡ್ನಲ್ಲಿ 8 ಪಿಂಕ್ ಬಾಲ್ ಟೆಸ್ಟ್ಗಳನ್ನು ಆಡಿರುವ ಆಸೀಸ್ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ.