IND vs BAN: ಕಾನ್ಪುರದಲ್ಲಿ ಟೀಂ ಇಂಡಿಯಾ ದಾಖಲೆ ಹೇಗಿದೆ?
25 september 2024
Pic credit: Google
ಪೃಥ್ವಿ ಶಂಕರ
Pic credit: Google
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 27 ರಿಂದ ನಡೆಯಲಿದೆ.
Pic credit: Google
ಈ ಪಂದ್ಯದಲ್ಲಿ ಭಾರತ ತಂಡ ಅತಿಥಿಗಳ ವಿರುದ್ಧ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದ್ದರೆ, ಇತ್ತ ಬಾಂಗ್ಲಾದೇಶ ತಂಡಕ್ಕೆ ಸರಣಿಯನ್ನು ಸಮಬಲದೊಂದಿಗೆ ಅಂತ್ಯಗೊಳಿಸುವ ಅವಕಾಶವಿದೆ.
Pic credit: Google
ಆದರೆ ಕಾನ್ಪುರದಲ್ಲಿ ಭಾರತವನ್ನು ಸೋಲಿಸುವುದು ಬಾಂಗ್ಲಾದೇಶ ತಂಡಕ್ಕೆ ಕಷ್ಟ ಸಾಧ್ಯ. ಏಕೆಂದರೆ ಕಾನ್ಪುರದಲ್ಲಿ ಟೀಂ ಇಂಡಿಯಾದ ಈವರೆಗಿನ ದಾಖಲೆ ಅತ್ಯುತ್ತಮವಾಗಿದೆ.
Pic credit: Google
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಇದುವರೆಗೆ 23 ಟೆಸ್ಟ್ ಪಂದ್ಯಗಳನ್ನು ಆಡಿದೆ. ಭಾರತ ಆಡಿದ 23 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದಿದ್ದರೆ, ಮೂರರಲ್ಲಿ ಸೋಲು ಕಂಡಿದೆ.
Pic credit: Google
ಈ ಪೈಕಿ 13 ಪಂದ್ಯಗಳು ಡ್ರಾ ಆಗಿವೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ 51 ವರ್ಷಗಳಿಂದ ಕಾನ್ಪುರದಲ್ಲಿ ಭಾರತ ಯಾವುದೇ ಟೆಸ್ಟ್‌ನಲ್ಲಿ ಸೋತಿಲ್ಲ.
Pic credit: Google
1983ರಲ್ಲಿ ಭಾರತ ತಂಡವನ್ನು ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋಲಿಸಿತ್ತು.
Pic credit: Google
ಇನ್ನು ಈ ಮೈದಾನದಲ್ಲಿ 2021 ರಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ, ಆ ವೇಳೆ ನ್ಯೂಜಿಲೆಂಡ್ ತಂಡವನ್ನು ಎದುರಿಸಿತ್ತು. ಆದರೆ ಈ ಪಂದ್ಯ ಡ್ರಾ ಆಗಿತ್ತು.
ಟೆಸ್ಟ್‌ನಲ್ಲಿ ಟೀಂ ಇಂಡಿಯಾದ 10 ಅತಿ ದೊಡ್ಡ ಗೆಲುವುಗಳಿವು