ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಹುತೇಕ ಎಲ್ಲಾ ತಂಡದ ವಿರುದ್ಧ ಸಾಕಷ್ಟು ರನ್ ಗಳಿಸಿದ್ದಾರೆ ಆದರೆ ಬಾಂಗ್ಲಾದೇಶ ವಿರುದ್ಧ ಅವರ ರನ್ ಬರ ಈಗಲೂ ಮುಂದುವರಿದಿದೆ.
Pic credit: Google
ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬೇಗನೇ ಔಟಾಗಿದ್ದ ರೋಹಿತ್ ಎರಡನೇ ಇನಿಂಗ್ಸ್ನಲ್ಲೂ ನಿರಾಸೆ ಮೂಡಿಸಿದರು
Pic credit: Google
ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್ ಬಾರಿಸಿದ್ದ ಹಿಟ್ಮ್ಯಾನ್ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ಅವಕಾಶವಿತ್ತು.
Pic credit: Google
ಆದರೆ ಈ ಬಾರಿಯೂ ರೋಹಿತ್ ಅವರ ಬ್ಯಾಟ್ ಕೆಲಸ ಮಾಡದೆ ಕೇವಲ 5 ರನ್ ಗಳಿಸಿ ತಸ್ಕಿನ್ ಅಹ್ಮದ್ ಎಸೆತದಲ್ಲಿ ಔಟಾದರು.
Pic credit: Google
ಈ ರೀತಿಯಾಗಿ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ರನ್ ಬರ ಎದುರಿಸುತ್ತಿರುವುದು ಇದು ಐದನೇ ಬಾರಿ. ಅದರಲ್ಲೂ 4 ಬಾರಿ ರೋಹಿತ್ ಸಿಂಗಲ್ ಡಿಜಿಟ್‌ಗೆ ಔಟಾಗಿರುವುದು ಆಘಾತಕ್ಕಾರಿ ಸಂಗತಿಯಾಗಿದೆ.
Pic credit: Google
ರೋಹಿತ್ ಇದುವರೆಗೆ ಬಾಂಗ್ಲಾದೇಶದ ವಿರುದ್ಧ 5 ಇನ್ನಿಂಗ್ಸ್‌ಗಳಲ್ಲಿ ಕೇವಲ 44 ರನ್ ಗಳಿಸಿದ್ದಾರೆ, ಇದರಲ್ಲಿ ಅವರ ಗರಿಷ್ಠ ಸ್ಕೋರ್ 21 ರನ್ ಆಗಿದೆ.