ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ರೂವಾರಿ ಎನಿಸಿಕೊಂಡರು.

23 October 2023

ಕಿವೀಸ್ ವಿರುದ್ಧ 104 ಎಸೆತಗಳಲ್ಲಿ 95 ರನ್ ಸಿಡಿಸಿದ ಕೊಹ್ಲಿ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸಿ ಶತಕ ವಂಚಿತರಾದರು.

ಆದರೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಕೊಹ್ಲಿಗೆ ಇಡೀ ಕ್ರಿಕೆಟ್​ ಲೋಕವೇ ಶಹಬ್ಬಾಸ್ ಹೇಳುತ್ತಿದೆ.

ಅವರ ಸಾಲಿನಲ್ಲಿ ಕೊಹ್ಲಿ ಮಡದಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಸೇರಿದ್ದಾರೆ.

ತಮ್ಮ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಕೊಹ್ಲಿ ಆಟದ ಫೋಟೋಗಳನ್ನು ಪೋಸ್ಟ್ ಮಾಡಿರುವ ಅನುಷ್ಕಾ ಕೊಹ್ಲಿಯನ್ನು ಕೊಂಡಾಡಿದ್ದಾರೆ.

ಮ್ಯಾಟ್ ಹೆನ್ರಿ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ಕೊಹ್ಲಿ, ಗ್ಲೆನ್ ಫಿಲಿಪ್ಸ್ ಅವರ ಕೈಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು.

ಕೊಹ್ಲಿ ಕ್ಯಾಚ್ ನೀಡಿದ ಫೋಟೋವನ್ನು ಪೋಸ್ಟ್ ಮಾಡಿರುವ ಅನುಷ್ಕಾ "ನಿಮ್ಮ ಬಗ್ಗೆ ಯಾವಾಗಲೂ ಹೆಮ್ಮೆಪಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಕೊಹ್ಲಿ ಬ್ಯಾಟ್ ಬೀಸುತ್ತಿರುವ ಇನ್ನೊಂದು ಫೋಟೋವನ್ನು ಪೋಸ್ಟ್ ಮಾಡಿರುವ  ಅನುಷ್ಕಾ ‘ಸ್ಟಾರ್ಮ್ ಚೇಸರ್' ಎಂದು ಬಣ್ಣಿಸಿದ್ದಾರೆ.