2023ರ ವಿಶ್ವಕಪ್‌ನಲ್ಲಿ ತನ್ನ ಗೆಲುವಿನ ಸರಣಿ ಮುಂದುವರಿಸಿರುವ ಟೀಂ ಇಂಡಿಯಾ ನ್ಯೂಜಿಲೆಂಡ್‌ ತಂಡವನ್ನು ಸಹ ಸೋಲಿಸಿದೆ.

22 October 2023

ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 20 ವರ್ಷಗಳ ನಂತರ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಮೊಹಮ್ಮದ್ ಶಮಿ ಅವರ 5 ವಿಕೆಟ್‌ಗಳ ಆಧಾರದ ಮೇಲೆ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 273 ರನ್‌ಗಳಿಗೆ ಸೀಮಿತಗೊಳಿಸಿತು.

ಕಿವೀಸ್ ಪರ ಡ್ಯಾರಿಲ್ ಮಿಚೆಲ್ ಗರಿಷ್ಠ 130 ರನ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಟೀಂ ಇಂಡಿಯಾ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಅಮೋಘ 95 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು.

ಇದು ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಸತತ 5ನೇ ಜಯವಾಗಿದ್ದು, ಈ ಗೆಲುವಿನೊಂದಿಗೆ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಭಾರತದ ಮುಂದಿನ ಪಂದ್ಯ ಇದೀಗ ಇಂಗ್ಲೆಂಡ್ ವಿರುದ್ಧ ಅಕ್ಟೋಬರ್ 29 ರಂದು ಲಕ್ನೋದಲ್ಲಿ ನಡೆಯಲಿದೆ.