ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ.
100 ಪದಕ
ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತ 25 ಚಿನ್ನ, 35 ಬೆಳ್ಳಿ ಮತ್ತು 40 ಕಂಚು ಗೆಲ್ಲುವ ಮೂಲಕ 100 ಪದಕಗಳ ಐತಿಹಾಸಿಕ ದಾಖಲೆಯನ್ನು ಮುಟ್ಟಿತು.
ಯಾವುದರಲ್ಲಿ ಪದಕ?
ಶೂಟಿಂಗ್ ಮತ್ತು ಟ್ರ್ಯಾಕ್-ಫೀಲ್ಡ್‌ನಲ್ಲಿ 22 ಮತ್ತು 29 ಪದಕ. ರೋಯಿಂಗ್‌ನಲ್ಲಿ 5 ಪದಕ, ಸೈಲಿಂಗ್‌ನಲ್ಲಿ 3 ಸೇರಿದಂತೆ ಇತರ ಪದಕಗಳು ಅನೇಕ ವಿಭಾಗಗಳಲ್ಲಿ ಬಂದಿವೆ.
ಕಬಡ್ಡಿಯಲ್ಲಿ ಚಿನ್ನ
2018 ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತೀಯ ಮಹಿಳಾ ಕಬಡ್ಡಿ ತಂಡವು ಇಂದು ಚೈನೀಸ್ ತೈಪೆ ವಿರುದ್ಧ ಚಿನ್ನದ ಪದಕವನ್ನು ಮರಳಿ ಪಡೆಯಿತು.
ಹಾಕಿಯಲ್ಲಿ ಚಿನ್ನ
ಭಾರತೀಯ ಪುರುಷರ ಹಾಕಿ ತಂಡ ಫೈನಲ್‌ನಲ್ಲಿ ಜಪಾನ್ ತಂಡವನ್ನು 5-1 ಅಂತರದಿಂದ ಸೋಲಿಸುವ ಮೂಲಕ ಭಾರತದ ಖಾತೆಗೆ ಮತ್ತೊಂದು ಚಿನ್ನವನ್ನು ಸೇರಿಸಿದರು.
ಮಹಿಳೆಯರ ಸಿಂಹ ಪಾಲು
ಭಾರತದ ಹಲವಾರು ಮಹಿಳಾ ಅಥ್ಲೀಟ್‌ಗಳಾದ ಸಿಫ್ಟ್ ಕೌರ್ ಸಮ್ರಾ, ಪಾಲಕ್ ಗುಲಿಯಾ, ಪಾರುಲ್ ಚೌಧರಿ, ಅಣ್ಣು ರಾಣಿ, ಪರ್ವೀನ್ ಹೂಡಾ, ಲೊವ್ಲಿನಾ, ಹರ್ಮಿಲನ್ ಸೇರಿದಂತೆ ಅನೇಕರು ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ.
ಮೋದಿ ಸಂವಾದ
ಅಕ್ಟೋಬರ್ 10 ರಂದು ನಮ್ಮ ಏಷ್ಯನ್ ಗೇಮ್ಸ್ ತಂಡ ಮತ್ತು ನಮ್ಮ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.