ಕನ್ನಡ ರಾಜ್ಯೋತ್ಸವದಂದು ಭಾರತ- ಪಾಕ್ ನಡುವೆ ಕ್ರಿಕೆಟ್ ಫೈಟ್
30 october 2024
Pic credit: Google
ಪೃಥ್ವಿ ಶಂಕರ
ಹಾಂಗ್ ಕಾಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸಿಕ್ಸಸ್ ಟೂರ್ನಮೆಂಟ್ ನವೆಂಬರ್ 1 ರಿಂದ ಪ್ರಾರಂಭವಾಗಲಿದ್ದು, ನವೆಂಬರ್ 3 ರವರೆಗೆ ನಡೆಯಲಿದೆ.
Pic credit: Google
1992 ರಲ್ಲಿ ಪ್ರಾರಂಭವಾದ ಈ ಪಂದ್ಯಾವಳಿಯು ಆರಂಭಿಕ ಹಂತದಲ್ಲಿ ಬಹಳ ಜನಪ್ರಿಯವಾಗಿತ್ತು ಆದರೆ 2017 ರಲ್ಲಿ ಇದನ್ನು ನಿಲ್ಲಿಸಲಾಯಿತು. ಇದೀಗ 7 ವರ್ಷಗಳ ನಂತರ ಮತ್ತೆ ಈ ಟೂರ್ನಿಯನ್ನು ಆರಂಭಿಸಲಾಗಿದೆ.
Pic credit: Google
ಈ ಪಂದ್ಯಾವಳಿಯ ಪಂದ್ಯದಲ್ಲಿ ಎರಡು ತಂಡಗಳಿಂದ ತಲಾ 6 ಆಟಗಾರರು ಭಾಗವಹಿಸುತ್ತಾರೆ. ಅದೇ ಸಮಯದಲ್ಲಿ, ಪಂದ್ಯವು ತಲಾ 5 ಓವರ್ಗಳದ್ದಾಗಿರುತ್ತದೆ.
Pic credit: Google
ಈ ಟೂರ್ನಿಯ ಮೊದಲ ದಿನ ಟೀಂ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಉಭಯ ದೇಶಗಳ ನಡುವಿನ ಈ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 11:30ಕ್ಕೆ ನಡೆಯಲಿದೆ.
Pic credit: Google
ಈ ಪಂದ್ಯಾವಳಿಗಾಗಿ, ಭಾರತವು 7 ಆಟಗಾರರ ತಂಡವನ್ನು ಹಾಂಕಾಂಗ್‌ಗೆ ಕಳುಹಿಸಿದ್ದು, ತಂಡದ ನಾಯಕತ್ವ ಕನ್ನಡಿಗ ರಾಬಿನ್ ಉತ್ತಪ್ಪ ಅವರ ಕೈಯಲ್ಲಿದೆ.
Pic credit: Google
ರಾಬಿನ್ ಉತ್ತಪ್ಪ ಅವರಲ್ಲದೆ, ಸ್ಟುವರ್ಟ್ ಬಿನ್ನಿ, ಕೇದಾರ್ ಜಾಧವ್, ಮನೋಜ್ ತಿವಾರಿ, ಶಹಬಾಜ್ ನದೀಮ್, ಭರತ್ ಚಿಪ್ಲಿ ಮತ್ತು ಶ್ರೀವತ್ಸ್ ಗೋಸ್ವಾಮಿ ಕೂಡ ತಂಡದ ಭಾಗವಾಗಿದ್ದಾರೆ.
Pic credit: Google
ಭಾರತ ತಂಡ 2005ರಲ್ಲಿ ಒಮ್ಮೆ ಈ ಪ್ರಶಸ್ತಿ ಗೆದ್ದಿದ್ದರೆ ಎರಡು ಬಾರಿ ರನ್ನರ್ ಅಪ್ ಕೂಡ ಆಗಿದೆ.