ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಯಾರಿಗೆ ಹೆಚ್ಚು ಸಹಕಾರಿ ಎಂಬುದರ ವಿವರ ಇಲ್ಲಿದೆ.
13 October 2023
ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯದ ಗೆಲುವಿನೊಂದಿಗೆ, ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಅಜೇಯ ಓಟವನ್ನು (8-0) ಮುಂದುವರೆಸಲು ಬಯಸಿದೆ.
ಇತ್ತ ಪಾಕಿಸ್ತಾನ ಕೂಡ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಮೊದಲ ಬಾರಿಗೆ ಗೆಲ್ಲುವ ಭರವಸೆಯೊಂದಿಗೆ ಕಣಕ್ಕಿಳಿಯುತ್ತಿದೆ.
ಆದಾಗ್ಯೂ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ದೊಡ್ಡ ಪಾತ್ರವನ್ನು ವಹಿಸುವ ಕಾರಣ ಎರಡೂ ತಂಡಗಳಿಗೆ ಇದು ಸವಾಲಿನದಾಗಿದೆ. ಸಂಜೆಯ ವೇಳೆಗೆ ಇಬ್ಬನಿ ಬೀಳುತ್ತಿರುವುದೇ ಇದಕ್ಕೆ ಕಾರಣ.
ಹಗಲಿನಲ್ಲಿ ಈ ಮೈದಾನದಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿದ್ದು, ಬಿಗ್ ಸ್ಕೋರ್ ಮಾಡಲು ಸಾಧ್ಯವಿಲ್ಲ.
ಇಲ್ಲಿ ನಡೆದ 16 ಹಗಲು-ರಾತ್ರಿ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಕೇವಲ ಎರಡು ಬಾರಿ ಮಾತ್ರ 300ಕ್ಕೂ ಹೆಚ್ಚು ಸ್ಕೋರ್ ಕಲೆಹಾಕಿದೆ.
ಬೃಹತ್ ಟಾರ್ಗೆಟ್ ನಡುವೆಯೂ ಸಂಜೆ ವೇಳೆಗೆ ಇಬ್ಬನಿ ಬಿದ್ದರೆ ಬೆನ್ನಟ್ಟುವುದು ಕಷ್ಟವಾಗುವುದಿಲ್ಲ. ಇಲ್ಲಿ ನಡೆದಿರುವ 16 ಪಂದ್ಯಗಳ ಪೈಕಿ 9 ಪಂದ್ಯಗಳನ್ನು ಗುರಿ ಬೆನ್ನಟ್ಟಿದ ತಂಡ ಗೆದ್ದಿದ್ದರೆ, 7 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ.
ಹೀಗಾಗಿ ಮೋದಿ ಮೈದಾನದಲ್ಲಿ ಟಾಸ್ ಬಹಳ ಮುಖ್ಯವಾಗುತ್ತದೆ. ಆದರೆ ರೋಹಿತ್ ಶರ್ಮಾ ಎರಡೂ ಪಂದ್ಯಗಳಲ್ಲಿ ಟಾಸ್ ಸೋತಿದ್ದು, ಅಹಮದಾಬಾದ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗೆಲ್ಲಬೇಕಾದರೆ ವೇಗಿಗಳ ಪಾತ್ರ ಮಹತ್ವದ್ದಾಗಿದೆ.
ಭಾರತ- ಅಫ್ಘಾನಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳ ಪಟ್ಟಿ ಇಲ್ಲಿದೆ.
ಕಳೆದ ವರ್ಷ ಇದೇ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎರಡು ಬಾರಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತ್ತು. ಈ ಎರಡೂ ಪಂದ್ಯಗಳಲ್ಲಿ ವೇಗಿಗಳು 7 ಮತ್ತು 8 ವಿಕೆಟ್ ಪಡೆದಿದ್ದರು.
ಇನ್ನೂ ಇಲ್ಲಿ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ನೀಡಿದ್ದ 283 ರನ್‌ಗಳ ಗುರಿಯನ್ನು ಕೇವಲ 37 ಓವರ್‌ಗಳಲ್ಲಿ ಸಾಧಿಸಿತ್ತು. ಹೀಗಾಗಿ ಇಲ್ಲಿ ಗುರಿ ಬೆನ್ನಟ್ಟುವುದೇ ಸೂಕ್ತ.