ಅಫ್ಘಾನಿಸ್ತಾನದ ವಿರುದ್ಧ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ವಕಪ್​ನಲ್ಲಿ ಅಧಿಕ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.

12 October 2023

ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ 25 ವಿಶ್ವಕಪ್ ಪಂದ್ಯಗಳಿಂದ 4 ಶತಕ ಸಿಡಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರ ಮಾರ್ಕ್​ ವಾ 22 ವಿಶ್ವಕಪ್ ಪಂದ್ಯಗಳಿಂದ 4 ಶತಕ ಸಿಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ 22 ವಿಶ್ವಕಪ್ ಪಂದ್ಯಗಳಿಂದ 4 ಶತಕ ಸಿಡಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ 21 ಇನ್ನಿಂಗ್ಸ್​ಗಳಿಂದ 4 ಶತಕ ಸಿಡಿಸಿದ್ದಾರೆ.

ಆಸ್ಟ್ರೇಲಿಯಾದ ಹಾಲಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 18 ಇನ್ನಿಂಗ್ಸ್​ಗಳಿಂದ 4 ಶತಕ ಸಿಡಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 42 ಪಂದ್ಯಗಳಿಂದ 5 ಶತಕ ಸಿಡಿಸಿದ್ದಾರೆ.

35 ಇನ್ನಿಂಗ್ಸ್​ಗಳಲ್ಲಿ 5 ಶತಕ ಸಿಡಿಸಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ 3ನೇ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 44 ಇನ್ನಿಂಗ್ಸ್​ಗಳಿಂದ 6 ಶತಕ ಸಿಡಿಸಿದ್ದಾರೆ.

ಏಕದಿನ ವಿಶ್ವಕಪ್​ನಲ್ಲಿ 19ನೇ ಪಂದ್ಯವನ್ನಾಡಿದ ರೋಹಿತ್ 7ನೇ ಶತಕ ಸಿಡಿಸುವ ಮೂಲಕ ಈ ದಾಖಲೆ ಬರೆದರು.