ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಶ್ರೇಯಸ್ ಅಯ್ಯರ್ ಅತಿ ಉದ್ದದ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ.

12 October 2023

2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದೆ.

ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದಿದ್ದ ಭಾರತ ತಂಡ ಇದೀಗ ಎರಡನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಅಫ್ಘಾನಿಸ್ತಾನವನ್ನು ಸೋಲಿಸಿದೆ.

ಈ ಪಂದ್ಯದಲ್ಲಿ ನಾಯಕ ರೋಹಿತ್ ಶತಕ ಸಿಡಿಸಿ ದಾಖಲೆ ಬರೆದರೆ ಶ್ರೇಯಸ್ ಅಯ್ಯರ್ ಏಕೈಕ ಸಿಕ್ಸರ್ ಸಿಡಿಸ ದಾಖಲೆ ಬರೆದರು.

ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಬೌಲ್ ಮಾಡಿದ 33ನೇ ಓವರ್‌ನ ಮೊದಲ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಅತಿ ಎತ್ತರದ ಮತ್ತು ಉದ್ದದ ಸಿಕ್ಸರ್ ಬಾರಿಸಿದರು.

ಶ್ರೇಯಸ್ ಅವರ ಈ ಸಿಕ್ಸರ್ ನೇರವಾಗಿ 101 ಮೀಟರ್ ದೂರದಲ್ಲಿ ಬಿದ್ದಿತು. ಈ ಮೂಲಕ ಅಯ್ಯರ್ ಈ ವಿಶ್ವಕಪ್ 2023 ರಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಇದರೊಂದಿಗೆ ಇದೇ ಪಂದ್ಯದಲ್ಲಿ 93 ಮೀ. ಉದ್ದದ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ರೋಹಿತ್ ಶರ್ಮಾ ದಾಖಲೆಯನ್ನು ಅಯ್ಯರ್ ಮುರಿದರು.

ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅಜೇಯ 25 ರನ್ ಗಳಿಸಿ ವಿರಾಟ್ ಕೊಹ್ಲಿ ಜೊತೆ 68 ರನ್ ಜೊತೆಯಾಟ ನಡೆಸಿದರು.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಶ್ರೇಯಸ್ ಅಯ್ಯರ್ ಅತಿ ಉದ್ದದ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ.