ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಶತಕ ವಂಚಿತರಾಗಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿ ಇಲ್ಲಿದೆ.

11 October 2023

ಮೊಹಮ್ಮದ್ ಅಜರುದ್ದೀನ್: 1992 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 93 ರನ್​ಗಳಿಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾಗಿದ್ದರು.

ಸಚಿನ್ ತೆಂಡೂಲ್ಕರ್: 1996 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 90 ರನ್, 2003 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 98 ರನ್ ಮತ್ತು ಶ್ರೀಲಂಕಾ ವಿರುದ್ಧ 97 ರನ್​ಗಳಿಗೆ ಔಟಾಗಿದ್ದರು.

ನವಜೋತ್ ಸಿಧು: 1996 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 93 ರನ್​ಗಳಿಗೆ ಔಟಾಗಿ ಶತಕದಿಂದ ವಂಚಿತರಾಗಿದ್ದರು.

ಸೌರವ್ ಗಂಗೂಲಿ: 1999 ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 97 ರನ್​ ಸಿಡಿಸಿ ವಿಕೆಟ್ ಒಪ್ಪಿಸಿದ್ದರು.

ಗೌತಮ್ ಗಂಭೀರ್: 2011 ರ ವಿಶ್ವಕಪ್‌ ಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ 97 ರನ್​ಗಳಿಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾಗಿದ್ದರು.

ಎಂಎಸ್ ಧೋನಿ: 2011 ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 91 ರನ್ ಸಿಡಿಸಿದ್ದರು.

ಕೆಎಲ್ ರಾಹುಲ್: 2023 ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 97 ರನ್ ಕಲೆಹಾಕಿದ್ದಾರೆ.