ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಟೂರ್ನಮೆಂಟ್‌ನ ಅಗ್ರ ಎರಡು ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.

04 November 2023

ಈ ವಿಶ್ವಕಪ್​ನಲ್ಲಿ ತನ್ನ ಅಜೇಯ ಓಟ ಮುಂದುವರೆಸಿರುವ ಭಾರತ ಆಡಿರುವ 7 ಪಂದ್ಯಗಳನ್ನು ಗೆದ್ದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಮತ್ತೊಂದಡೆ ದಕ್ಷಿಣ ಆಫ್ರಿಕಾ ತಂಡ ಆಡಿರುವ 7 ಪಂದ್ಯಗಳ ಪೈಕಿ 1 ಪಂದ್ಯದಲ್ಲಿ ಸೋತು, 6 ಪಂದ್ಯಗಳಲ್ಲಿ ಗೆಲುವು ಸಾದಿಸಿದ್ದು, 2ನೇ ಸ್ಥಾನದಲ್ಲಿದೆ.

42 ವರ್ಷಗಳ ಏಕದಿನ ಕ್ರಿಕೆಟ್ ಪೈಪೋಟಿಯಲ್ಲಿ ಉಭಯ ತಂಡಗಳು ಒಟ್ಟು 90 ಪಂದ್ಯಗಳನ್ನು ಆಡಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ ತಂಡ ಮೇಲುಗೈ ಸಾಧಿಸಿದೆ.

ಈ ಪಂದ್ಯಗಳಲ್ಲಿ ಪೈಕಿ ದಕ್ಷಿಣ ಆಫ್ರಿಕಾ ತಂಡ 50 ಪಂದ್ಯಗಳಲ್ಲಿ ಗೆದ್ದಿದ್ದರೆ, ಭಾರತದ 37 ಪಂದ್ಯಗಳನ್ನು ಗೆದ್ದುಬೀಗಿದೆ. ಮೂರು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಇಲ್ಲೂ ಆಫ್ರಿಕಾ ತಂಡ, ಭಾರತದ ವಿರುದ್ಧ ಮೇಲುಗೈ ಸಾಧಿಸಿದೆ.

ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು ಐದು ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾ 3 ಪಂದ್ಯಗಳನ್ನು ಗೆದ್ದಿದ್ದರೆ ಭಾರತ 2 ಪಂದ್ಯಗಳನ್ನು ಗೆದ್ದಿದೆ.

ಇನ್ನೂ ತವರಿನಲ್ಲಿ ಭಾರತ, ಆಫ್ರಿಕಾದೆದುರು ಮೇಲುಗೈ ಸಾಧಿಸಿರುವುದು ಗಮನಾರ್ಹ. ಭಾರತದಲ್ಲಿ ಎರಡೂ ತಂಡಗಳ ನಡುವೆ 31 ಪಂದ್ಯಗಳು ನಡೆದಿವೆ.

ಈ 31 ಪಂದ್ಯಗಳ ಪೈಕಿ ಭಾರತ 17 ಪಂದ್ಯಗಳನ್ನು ಗೆದ್ದಿದ್ದರೆ 14 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದೆ.